alex Certify ಆಸೀಸ್ ಫುಟ್ಬಾಲ್ ತಂಡ ‘ವಿಶ್ವಕಪ್’ ಗೆ ಅರ್ಹತೆ ಪಡೆದಾಗ ವರದಿಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸೀಸ್ ಫುಟ್ಬಾಲ್ ತಂಡ ‘ವಿಶ್ವಕಪ್’ ಗೆ ಅರ್ಹತೆ ಪಡೆದಾಗ ವರದಿಗಾರನ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ..?

ಕ್ರೀಡೆಯು ಜನರನ್ನು ಒಟ್ಟುಗೂಡಿಸುವ ವಿಶಿಷ್ಟ ವಿಧಾನವನ್ನು ಹೊಂದಿದೆ. ಇದು ಜನರನ್ನು ಒಟ್ಟುಗೂಡಿಸುತ್ತದೆ. ಮಾಡು ಇಲ್ಲವೆ ಮಡಿ ವರ್ಲ್ಡ್ ಫುಟ್‌ಬಾಲ್ ಕಪ್ ಅರ್ಹತಾ ಪ್ಲೇಆಫ್‌ನಲ್ಲಿ ಪೆರು ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್‌ಗೆ ಅರ್ಹತೆ ಪಡೆದಿದೆ. ಗೋಲ್‌ಕೀಪರ್ ಆಂಡ್ರ್ಯೂ ರೆಡ್‌ಮೇನ್ ಅವರು ವೀರಾವೇಶದಿಂದ ಆಡಿದ್ದಾರೆ. ಇದು ಆಸೀಸ್ ಫುಟ್ಬಾಲ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನೇ ಸೃಷ್ಟಿಸಿದೆ.

ಕತಾರ್ ವಿಶ್ವಕಪ್ 2022 ಗೆ ತಂಡ ಪ್ರವೇಶ ಪಡೆದಾಗ ಪ್ರೇಕ್ಷಕರೊಂದಿಗೆ ಕ್ರೀಡಾ ವರದಿಗಾರ ಟೋನಿ ಆರ್ಮ್‌ಸ್ಟ್ರಾಂಗ್ ಕೂಡ ಬಹಳ ಸಂಭ್ರಮದಿಂದ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋವನ್ನು ಎಬಿಸಿ ಆಸ್ಟ್ರೇಲಿಯಾ ಹಂಚಿಕೊಂಡಿದೆ. ಉತ್ಸಾಹಭರಿತ ಫುಟ್‌ಬಾಲ್ ಅಭಿಮಾನಿಗಳೊಂದಿಗೆ ಟೋನಿ ಖುಷಿಯಿಂದ ಜಿಗಿಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಅಭಿಮಾನಿಗಳು ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆ ಅರ್ಹತೆ ಪಡೆದಿದ್ದಕ್ಕೆ ಸಂತೋಷದಿಂದ ಸಂಭ್ರಮಾಚರಣೆ ಮಾಡುತ್ತಿದ್ದರೆ, ಅವರ ಮಧ್ಯೆ ನಿಂತ ವರದಿಗಾರ ಕೂಡ ಖುಷಿಯಿಂದ ಕುಣಿದಾಡಿದ್ದಾನೆ. ತನ್ನ ಸಂಭ್ರಮವನ್ನು ಆತ ಹತೋಟಿಗೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವೈರಲ್ ವಿಡಿಯೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಆಸ್ಟ್ರೇಲಿಯಾ ಪುರುಷರ ಫುಟ್‌ಬಾಲ್ ತಂಡವನ್ನು ಸೊಕೆರೋಸ್ ಎಂದೂ ಕರೆಯುತ್ತಾರೆ.

— Matt Bevan (@MatthewBevan) June 13, 2022

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...