
ಇನ್ಸ್ಟಾಗ್ರಾಂ ಖಾತೆಯಲ್ಲಿ ಉರ್ಫಿ ಸೋಮವಾರದಂದು ನಾಲ್ಕು ಫೋಟೋಗಳನ್ನು ಶೇರ್ ಮಾಡಿದ್ದರು. ಈ ಫೋಟೋದಲ್ಲಿ ನಟಿ ಉರ್ಫಿ ತಿಳಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ಫೋಟೋಗಳನ್ನು ಶೇರ್ ಮಾಡಿದ್ದು ಉರ್ಫಿ ಈಗ ಸಮಯವೆಷ್ಟು ಎಂದು ಶೀರ್ಷಿಕೆ ನೀಡಿದ್ದರು. ಇಂತದ್ದೊಂದು ಬೋಲ್ಡ್ ಡ್ರೆಸ್ನಲ್ಲಿ ನಟಿ ಉರ್ಫಿಯನ್ನು ನೋಡಿದ ನೆಟ್ಟಿಗರು ಮನಬಂದಂತೆ ಟ್ರೋಲ್ ಮಾಡಿದ್ದಾರೆ.
ನೀನು ಒಳ ಉಡುಪುಗಳನ್ನೇ ಧರಿಸಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದರೆ ಇನ್ನೊಬ್ಬರು ಈ ಡ್ರೆಸ್ ಅತ್ಯಂತ ಹೊಲಸಾಗಿದೆ ಎಂದು ಜರಿದಿದ್ದಾರೆ. ಇನ್ನೊಬ್ಬರು ಇದಕ್ಕಿಂತ ನೀನು ಬೆತ್ತಲಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಬರೆದಿದ್ದಾರೆ.
ಅಂದಹಾಗೆ ತಮ್ಮ ಉಡುಪಿನ ಕಾರಣಕ್ಕೆ ಈ ರೀತಿ ನೆಟ್ಟಿಗರ ಬಳಿ ಹೇಳಿಸಿಕೊಳ್ಳುವುದು ಉರ್ಫಿಗೆ ಹೊಸದೇನಲ್ಲ. ಕೆಲವು ದಿನಗಳ ಹಿಂದೆ ನಟಿ ಉರ್ಫಿ ಬಿಕಿನಿ ಧರಿಸಿದ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗೂ ಸಹ ನೆಟ್ಟಿಗರು ಅತ್ಯಂತ ಕೆಟ್ಟದಾಗಿ ಕಮೆಂಟ್ ಮಾಡಿದ್ದರು.