
ಇಂಗ್ಲೆಂಡ್ ನ ವಿಸ್ತಾರವಾದ ನಗರಗಳಲ್ಲಿ ಶೆಫೀಲ್ಡ್ ಕೂಡ ಒಂದು. ಇದು ದಕ್ಷಿಣ ಯಾರ್ಕ್ಶೈರ್ ಭಾಗದಲ್ಲಿದೆ. ಇತ್ತೀಚೆಗೆ ಒಂದು ಸ್ಟುಡಿಯೋ ಫ್ಲಾಟ್ ಇಲ್ಲಿ ಬಾಡಿಗೆಗೆ ಲಭ್ಯವಿತ್ತು. ಅದು ಕೈಗೆಟಕುವ ಬಾಡಿಗೆ ದರವನ್ನು ಹೊಂದಿದ್ದರಿಂದ ತುಂಬ ವೈರಲ್ ಕೂಡ ಆಗಿತ್ತು.
ಶೆಫೀಲ್ಡ್ ನಗರದ ಹೊರಭಾಗದಲ್ಲಿರುವ ಈ ಸ್ಟುಡಿಯೋ ಫ್ಲಾಟ್ ಕೇವಲ £600 ತಿಂಗಳ ಬಾಡಿಗೆಗೆ ಲಭ್ಯವಿದೆ. ಭಾರತೀಯ ಮೌಲ್ಯದಲ್ಲಿ ಅದು 60,000 ರೂ. ಆಗಿದೆ.
ಈ ಸ್ಟುಡಿಯೋ ಫ್ಲಾಟ್ನಲ್ಲಿ ಅತ್ಯಾಕರ್ಷಕ ಅಡುಗೆ ಮನೆ, ಊಟದ ಮನೆ ಮತ್ತು ಒಂದು ಪ್ರತ್ಯೇಕವಾದ ಸ್ನಾನಗೃಹವಿದೆ. ಆದರೆ, ಈ ಫ್ಲಾಟ್ ನ ಆಂತರಿಕ ವಿನ್ಯಾಸದಲ್ಲಿ ಒಂದು ದೊಡ್ಡ ದೋಷವಿದೆ. ನಿದ್ರಿಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಿಲ್ಲ. ಹಾಸಿಗೆಯನ್ನು ಅಡುಗೆ ಮನೆಯ ಹಾಬ್ ಮತ್ತು ಕ್ಯಾಬಿನೆಟ್ಗಳ ಮೇಲೆ ನೇರವಾಗಿ ಹೊಂದಿಸಲಾಗಿದೆ. ಅಗಲ ಕಿರಿದಾಗಿರುವ ಮೆಟ್ಟಿಲುಗಳನ್ನೇರಿ ಅದನ್ನು ತಲುಪಬೇಕು.
‘ಆಸ್ತಿ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್