ಗಂಗಾ ಹಾಗೂ ಇತರ ನದಿಗಳ ಕಡೆಗೆ ಮಕ್ಕಳ ದೃಷ್ಠಿಕೋನವನ್ನು ಬದಲಾಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಭಾರತದ ಪ್ರಸಿದ್ಧ ಕಾರ್ಟೂನ್ ಪುಸ್ತಕದ ಚಾಚಾ ಚೌಧರಿ ಪಾತ್ರವನ್ನು ನಮಾಮಿ ಗಂಗೆ ಕಾರ್ಯಕ್ರಮದ ರಾಯಭಾರಿ ಆಗಿ ಆಯ್ಕೆ ಮಾಡಲಾಗಿದೆ.
ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾದ ಜೊತೆಗೆ ಡೈಮಂಡ್ ಟೂನ್ಸ್ ಕೂಡ ಕೈ ಜೋಡಿಸಿದ್ದು, ಈ ಮೂಲಕ ಕಾಮಿಕ್ಗಳನ್ನು ಅಭಿವೃದ್ಧಿಪಡಿಸಿ ವಿತರಿಸಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
BIG NEWS: ಖಾದಿ ಎಂಪೋರಿಯಂನಲ್ಲಿ ಪತ್ನಿಗಾಗಿ ಭರ್ಜರಿ ಸೀರೆ ಖರೀದಿಸಿದ ಸಿಎಂ
ಕೇಂದ್ರ ಸರ್ಕಾರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಈ ವಿಚಾರವಾಗಿ ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಚಾಚಾ ಚೌಧರಿ ಅಂದರೆ ಗೊತ್ತಿಲ್ಲ ಎಂಬವರು ಯಾರಿದ್ದಾರೆ ಹೇಳಿ..? ಕಂಪ್ಯೂಟರ್ಗಿಂತಲೂ ವೇಗವಾಗಿ ಓಡಬಲ್ಲ ಮೆದುಳನ್ನು ಹೊಂದಿದ್ದ ಚಾಚಾ ಚೌಧರಿ ಒಂದು ಪ್ರಸಿದ್ಧ ಕಾರ್ಟೂನ್ ಪಾತ್ರವಾಗಿದೆ. ಇನ್ಮುಂದೆ ಈ ಚಾಚಾ ಚೌಧರಿ ನಮಾಮಿ ಗಂಗೆಯ ಮ್ಯಾಸ್ಕಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ನದಿಯ ಸ್ವಚ್ಛತೆಯ ಕಡೆಗೆ ಮಕ್ಕಳಿಗೆ ಅರಿವು ಮೂಡಿಸುವ ಸಲುವಾಗಿ ಈ ಆಯ್ಕೆ ಮಾಡಲಾಗಿದೆ ಎಂದು ಬರೆದಿದ್ದಾರೆ.