ರಿಲಯನ್ಸ್ ಜಿಯೋ ಗ್ರಾಹಕರಿಗೆ ಖುಷಿ ಸುದ್ದಿಯೊಂದಿದೆ. ಜಿಯೋ ಅತ್ಯಂತ ಅಗ್ಗದ ಯೋಜನೆಯನ್ನು ಬಿಡುಗಡೆ ಮಾಡಿದೆ. ಯೋಜನೆಯ ಬೆಲೆ ಕೇವಲ 1 ರೂಪಾಯಿ. ಹೌದು, ಮೈ ಜಿಯೋ ಅಪ್ಲಿಕೇಷನ್ ನಲ್ಲಿ ಒಂದು ರೂಪಾಯಿ ಯೋಜನೆಯನ್ನು ನೀವು ನೋಡಬಹುದು.
ಸಿಮ್ ಸಕ್ರಿಯವಾಗಿಡಲು ಬಯಸುವವರಿಗೆ ಈ ಯೋಜನೆ ಉತ್ತಮವಾಗಿದೆ. ಈ ಯೋಜನೆಯಲ್ಲಿ ಕರೆ ಮತ್ತು ಎಸ್ ಎಂ ಸ್ ಸೌಲಭ್ಯವಿಲ್ಲ. ಒಂದು ರೂಪಾಯಿ ಯೋಜನೆಯು 30 ದಿನಗಳ ಮಾನ್ಯತೆ ಹೊಂದಿರುತ್ತದೆ. ಈ ಯೋಜನೆಯು ಕೇವಲ 100ಎಂಬಿ ಡೇಟಾವನ್ನು ನೀಡುತ್ತದೆ. ಡೇಟಾ ಮುಗಿದ ನಂತರ ಇಂಟರ್ನೆಟ್ ವೇಗವು 60ಕೆಬಿಪಿಎಸ್ ಗೆ ಇಳಿಯುತ್ತದೆ.
ಜಿಯೋದ ಒಂದು ರೂಪಾಯಿ ಯೋಜನೆಯು ದೇಶದ ಅತ್ಯಂತ ಅಗ್ಗದ ಯೋಜನೆಯಾಗಿದೆ. ಜಿಯೋ ಹೊರತುಪಡಿಸಿ, ಯಾವುದೇ ಟೆಲಿಕಾಂ ಕಂಪನಿಯು ಇಷ್ಟು ಕಡಿಮೆ ಪ್ಲಾನ್ ನೀಡಿಲ್ಲ.
ಜಿಯೋದ ಅಗ್ಗದ ಯೋಜನೆಯಲ್ಲಿ 10 ರೂಪಾಯಿ ಯೋಜನೆಯೂ ಸೇರಿದೆ. ಇದ್ರಲ್ಲಿ 7.47 ರೂಪಾಯಿ ಟಾಕ್-ಟೈಮ್ ಸಿಗಲಿದೆ. ಇನ್ನು 20 ರೂಪಾಯಿ ಯೋಜನೆಯಲ್ಲಿ 14.95 ರೂಪಾಯಿವರೆಗೆ ಟಾಕ್ ಟೈಮ್ ಸಿಗುತ್ತದೆ.