ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್ 5ಜಿ ಫೋನ್ನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್ ದೈತ್ಯ ಗೂಗಲ್ ಜೊತೆ ಸೇರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ 5 ಜಿ ಫೋನ್ಗಳನ್ನ ಮಾರುಕಟ್ಟೆಗೆ ತರುವ ಬಗ್ಗೆ ಮಾಹಿತಿ ನೀಡಿದೆ.
ಈ ಹೊಸ ಸಾಧನದಲ್ಲಿ ವಾಯ್ಸ್ ಅಸಿಸ್ಟಂಟ್, ಭಾಷಾ ಅನುವಾದ, ಸ್ಮಾರ್ಟ್ ಕ್ಯಾಮರಾ ಸೇರಿದಂತೆ ಇನ್ನೂ ಹಲವು ಬಗೆಯ ಸೌಲಭ್ಯಗಳು ಇರಲಿವೆ ಎನ್ನಲಾಗಿದೆ. ಈ ಹೊಸ ಸ್ಮಾರ್ಟ್ ಫೋನ್ಗಳು ಈ ವರ್ಷದ ಗಣೇಶ ಚತುರ್ಥಿ ಅಂದರೆ ಸೆಪ್ಟೆಂಬರ್ 10ನೇ ತಾರೀಖಿನಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಕಂಪನಿ ಹೇಳಿದೆ.
ಗೂಗಲ್ ಸಂಸ್ಥೆಯು ಕಳೆದ ವರ್ಷ ಎಂಜಿಎಂ ಕಾರ್ಯಕ್ರಮದಲ್ಲಿ ಜಿಯೋಗೆ 337 ಕೋಟಿ ರೂಪಾಯಿ ಹೂಡಿಕೆ ಮಾಡುವ ನಿರ್ಧಾರದ ಬಗ್ಗೆ ಘೋಷಣೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ 5ಜಿ ಫೋನ್ ಅಭಿವೃದ್ಧಿಯಾಗುತ್ತಿದೆ.
44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್ ಅಂಬಾನಿ, ಚಿಲ್ಲರೆ ವ್ಯಾಪಾರ, ತೈಲೋದ್ಯಮ ಸೇರಿದಂತೆ ಎಲ್ಲಾ ವ್ಯವಹಾರಗಳ ಬಗ್ಗೆ ಮೊದಲು ಮಾಹಿತಿ ನೀಡಿದ್ರು. ಇದೇ ವೇಳೆ ಗೂಗಲ್ ಹಾಗೂ ರಿಲಯನ್ಸ್ ಜಿಯೋ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಸ್ಮಾರ್ಟ್ಫೋನ್ ಬಿಡುಗಡೆಯ ಬಗ್ಗೆಯೂ ಘೋಷಣೆ ಮಾಡಿದ್ರು.
ಗೂಗಲ್ ಹಾಗೂ ಜಿಯೋ ಕಂಪನಿಯು ಜಂಟಿಯಾಗಿ ಜಿಯೋಫೋನ್ ನೆಕ್ಸ್ಟ್ ಎಂಬ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬರುತ್ತಿರೋದರ ಬಗ್ಗೆ ಘೋಷಣೆ ಮಾಡಲು ಹೆಮ್ಮೆ ಎನಿಸುತ್ತಿದೆ. ಇದೊಂದು ಎಲ್ಲಾ ಸೌಲಭ್ಯಗಳನ್ನ ಹೊಂದಿರುವ ಸ್ಮಾರ್ಟ್ ಫೋನ್ ಆಗಿದ್ದು ಗೂಗಲ್ ಹಾಗೂ ಜಿಯೋ ಎರಡಕ್ಕೂ ಸೇರಿದ ಅಪ್ಲಿಕೇಶನ್ಗಳು ಇದರಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ರು.