ಸಂಬಂಧ, ವಿಶ್ವಾಸ, ನಂಬಿಕೆ ಮೇಲೆ ನಿಂತಿರುತ್ತದೆ. ಪರಸ್ಪರ ನಂಬಿಕೆ, ಗೌರವವಿದ್ದಲ್ಲಿ ಸಂಬಂಧ ಗಟ್ಟಿಯಾಗುತ್ತದೆ. ನಂಬಿಕೆ ದ್ರೋಹವಾದ್ರೆ ಆ ಸಂಬಂಧದಲ್ಲಿ ಮುಂದುವರೆಯುವುದು ಕಷ್ಟ. ಯುಕೆ ಮಹಿಳೆಯೊಬ್ಬಳು ಸಂಭೋಗದ ನಂತ್ರ ಸಂಗಾತಿ ಮಾಡಿದ ಮೋಸವನ್ನು ಹೊರ ಹಾಕಿದ್ದಾಳೆ.
ಆಕೆಗೆ 27 ವರ್ಷ. ಆಕೆ ಪ್ರೇಮಿಗೆ 31 ವರ್ಷವಂತೆ. ಇಬ್ಬರ ಮಧ್ಯೆ ಫೋನ್ ನಲ್ಲಿ ಮಾತುಕತೆ ನಡೆಯುತ್ತಿತ್ತಂತೆ. ಕಳೆದ ಎರಡು ತಿಂಗಳಿಂದ ಇಬ್ಬರು ಭೇಟಿಯಾಗಿರಲಿಲ್ಲವಂತೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು, ಭೇಟಿ ನಿರ್ಧಾರ ಕೈಗೊಂಡಿದ್ದಾರೆ. 2 ತಿಂಗಳ ನಂತ್ರ ಭೇಟಿಯಾದ ಖುಷಿಯಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ದಾರೆ. ಈ ಖುಷಿಯಲ್ಲಿದ್ದ ಮಹಿಳೆಗೆ ಸಂಗಾತಿ ಶಾಕ್ ನೀಡಿದ್ದಾನೆ.
ತನಗೆ ಹರ್ಪಿಸ್ ಖಾಯಿಲೆಯಿದೆ ಎಂದಿದ್ದಾನೆ. ಹರ್ಪಿಸ್ ಲೈಂಗಿಕವಾಗಿ ಹರಡುವ ಸೋಂಕು. ಇದನ್ನು ಕೇಳ್ತಿದ್ದಂತೆ ಮಹಿಳೆ ಕಂಗಾಲಾಗಿದ್ದಾಳೆ. ಮುಂದೇನು ಮಾಡ್ಬೇಕು ಎಂಬುದು ಆಕೆಗೆ ತಿಳಿಯುತ್ತಿಲ್ಲ. ಶಾರೀರಿಕ ಸಂಬಂಧ ಬೆಳೆಸಿದ ನಂತ್ರ ಸಂಗಾತಿ ಮೋಸ ಮಾಡಿದ್ದಾನೆಂದು ಆಕೆ ಆರೋಪಿಸಿದ್ದಾಳೆ. ಆಕೆ ಬಿಟ್ಟಿರಲು, ಆಕೆ ಪ್ರೇಮಿಗೆ ಸಾಧ್ಯವಾಗ್ತಿಲ್ಲವಂತೆ. ಸರಿಯಾಗಿ ಮಾತ್ರೆ ಸೇವನೆ ಮಾಡುತ್ತೇನೆ. ಸುರಕ್ಷಿತ ಸೆಕ್ಸ್ ಗೆ ಆಧ್ಯತೆ ನೀಡುವುದಾಗಿ ಹೇಳ್ತಿದ್ದಾನಂತೆ. ಆದ್ರೆ ಆತ ನನಗೆ ಮೋಸ ಮಾಡಿದ್ದಾನೆನ್ನುವ ಮಹಿಳೆ, ಆತನ ಜೊತೆ ಸಂಬಂಧ ಮುಂದುವರಿಸಬೇಕಾ ಎಂದು ಪ್ರಶ್ನೆ ಮಾಡಿದ್ದಾಳೆ.
ಇದಕ್ಕೆ ತಜ್ಞರು ಸಲಹೆ ಕೂಡ ನೀಡಿದ್ದಾರೆ. ಹರ್ಪಿಸ್ ಒಂದು ಸಾಮಾನ್ಯ ಲೈಂಗಿಕ ಖಾಯಿಲೆ. ಸುರಕ್ಷತೆ ಜೊತೆ ಶಾರೀರಿಕ ಸಂಬಂಧ ಬೆಳೆಸಬಹುದು. ಆದ್ರೆ ಸಂಗಾತಿ ಜೊತೆ ಸಂಬಂಧ ಮುಂದುವರಿಸುವ ನಿರ್ಧಾರ ನಿನಗೆ ಬಿಟ್ಟಿದ್ದು ಎಂದು ತಜ್ಞರು ಸಲಹೆ ನೀಡಿದ್ದಾರೆ.