ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್.ಸಿ ಮಳಿಗೆ; ಸೋಶಿಯಲ್ ಮೀಡಿಯಾದಲ್ಲಿ #RejectKFC ಟ್ರೆಂಡ್ 25-10-2021 3:43PM IST / No Comments / Posted In: Karnataka, Latest News, Live News ತಮಿಳರ ಜೊತೆ ಜೊಮ್ಯಾಟೋ ವಿವಾದದ ಬಳಿಕ ಇದೀಗ ಕನ್ನಡಿಗರ ಜೊತೆಯಲ್ಲಿ ಕೆ.ಎಫ್.ಸಿ ವಿವಾದವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕರ್ನಾಟಕದ ಕೆ.ಎಫ್.ಸಿ ಮಳಿಗೆಯೊಂದರಲ್ಲಿ ಗ್ರಾಹಕರ ಕನ್ನಡ ಹಾಡಿನ ಕೋರಿಕೆಗೆ ಒಪ್ಪದ ಕಾರಣ ಕೆ.ಎಫ್.ಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆ.ಎಫ್.ಸಿ ವಿರುದ್ಧ ಸಾಕಷ್ಟು ಪೋಸ್ಟ್ಗಳು ಹರಿದಾಡಲು ಆರಂಭಿಸಿದೆ. ಕರ್ನಾಟಕದಲ್ಲಿರುವ ಮಳಿಗೆಯಲ್ಲಿ ಕನ್ನಡ ಹಾಡುಗಳನ್ನು ಹಾಕಲು ಒಪ್ಪದ ಕೆ.ಎಫ್.ಸಿ.ಯನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿ #RejectKFC ಎಂಬ ಹ್ಯಾಶ್ಟ್ಯಾಗ್ನ ಅಡಿಯಲ್ಲಿ ಪೋಸ್ಟ್ಗಳನ್ನು ಶೇರ್ ಮಾಡಲಾಗ್ತಿದೆ. ಟ್ವಿಟರ್ನಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ ಔಟ್ಲೆಟ್ನ ಸಿಬ್ಬಂದಿಯೊಬ್ಬರು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಆಗಿರುವ ಕಾರಣ ಕನ್ನಡ ಹಾಡುಗಳನ್ನು ಇಲ್ಲಿ ಪ್ಲೇ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆ.ಎಫ್.ಸಿ. ಆ್ಯಂಟಿ ಕನ್ನಡ ಮಳಿಗೆ ಎಂದು ಅನೇಕರು ಕಿಡಿಕಾರಿದ್ದಾರೆ. ಹೀಗಾಗಿ ಬಾಯ್ಕಾಟ್ ಕೆಎಫ್ಸಿ ಟ್ರೆಂಡ್ ಜೋರಾಗಿ ಸದ್ದು ಮಾಡ್ತಿದೆ. ಕನ್ನಡಿಗರು ಕೆ.ಎಫ್.ಸಿ.ಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಅನೇಕರು ಕೆ.ಎಫ್.ಸಿ. ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂವ್ ನೀಡಿದ್ದಾರೆ. ತಮಿಳಿಗರು ಜೊಮ್ಯಾಟೋಗೆ ಪಾಠ ಕಲಿಸಿದಂತೆ ಕನ್ನಡಿಗರು ಕೆ.ಎಫ್.ಸಿ.ಗೆ ಕಲಿಸುತ್ತಾರೆ ಎಂದು ಟ್ವೀಟ್ ಮಾಡಲಾಗ್ತಿದೆ. ಕರ್ನಾಟಕದಲ್ಲಿರುವ ಕೆಎಫ್ ಸಿ ಗಳಲ್ಲಿ ಕನ್ನಡ ಹಾಡು ಹಾಕುವಂತಿಲ್ಲ ಅಂತ @KFC_India ನಿಯಮ ಮಾಡಿದೆಯಂತೆ!#ಇದೆಂತಹಗಾಂಚಲಿ #BanKFCinKarnataka @CMofKarnataka @karkalasunil @rajanna_rupesh pic.twitter.com/a8SMvRXXmJ — ವಿನಯ್ 🇮🇳 (@meVinayRW) October 23, 2021 @KFC_India Kannadigas will teach you a lesson, As Tamilians did to @Zomato_india #RejectKFC #reject_KFC #kfcಕನ್ನಡಬೇಕು pic.twitter.com/r7NGmckWNV — Sunil Angadi ( ಸುನಿಲ್ ಅಂಗಡಿ ) (@SunilAngadi97) October 24, 2021 Let's resolve to deny the services of any private corporate that does not serve in the language of the individual states. Denial to serve in local languages is akin to disrespecting the local culture. Speak in the only languages corporates understand @ monetary loss.#RejectKFC — Dusky Tamilachi (@TamilRatsaschi) October 25, 2021 #RejectKFC Tamils fully supported this Trends.we respect those who are respect their mother tongue.Hindi is not a National Language. வாழ்க தமிழ் ಜೈ ಕನ್ನಡ pic.twitter.com/USpsosJFWg — Sathik Sait (@sait_sathik) October 25, 2021