alex Certify ಖಾತಾ ನೋಂದಣಿ ಮಾಡಿಸುವವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾತಾ ನೋಂದಣಿ ಮಾಡಿಸುವವರಿಗೆ ಗುಡ್ ನ್ಯೂಸ್

ಬೆಂಗಳೂರು: ವಸತಿ ಸಮುಚ್ಚಯದ ಖಾತಾ ನೋಂದಣಿ ಸರಳೀಕರಣಗೊಳಿಸಲಾಗಿದೆ. ಸಕಾಲ ಯೋಜನೆಯಡಿ ಸೌಲಭ್ಯ ಕಲ್ಪಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ಸೂಚನೆ ನೀಡಲಾಗಿದೆ.

ವಸತಿ ಸಮುಚ್ಚಯದಲ್ಲಿ ನಿವಾಸಿ ಖಾತಾ ನೋಂದಣಿಗೆ ಅರ್ಜಿ ಸಲ್ಲಿಸಿದರೆ ವಸತಿ ಸಮುಚ್ಚಯದ ಎಲ್ಲ ಘಟಕಗಳಿಗೂ ಮುನ್ಸಿಪಲ್ ಸಂಖ್ಯೆಯನ್ನು ಸೃಷ್ಟಿಸಲು ಒಂದೇ ಬಾರಿ ಕಡತ ಮಂಡಿಸಿ ಸಂಬಂಧಿತ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ತಿಳಿಸಲಾಗಿದೆ.

ವಸತಿ ಸಮುಚ್ಚಯದ ಘಟಕಗಳ ಮಾಲೀಕರು ಖಾತೆ ನೋಂದಣಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮತ್ತೊಮ್ಮೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ವಸತಿ ಸಮುಚ್ಚಯದ ಘಟಕಗಳ ಮಾಲೀಕರು ಖಾತೆ ನೋಂದಣಿಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಮತ್ತೊಮ್ಮೆ ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯದೆ ಅನುಮೋದನೆಗೊಂಡಿರುವ ಖಾತೆಯ ಉಪ ಮುನ್ಸಿಪಲ್ ಸಂಖ್ಯೆ ನೀಡಿ ಸಕಾಲದ ಕಾಲಮಿತಿಯೊಳಗೆ ಸೇವೆಯನ್ನು ಒದಗಿಸಲು ಅವಕಾಶ ನೀಡಲಾಗಿದೆ.

ಸಮುಚ್ಚಯದಲ್ಲಿ ನಿವೇಶನ ಖರೀದಿಸಿದವರು ಖಾತೆ ನೋಂದಣಿಗೆ ಸಹಾಯಕ ಕಂದಾಯ ಅಧಿಕಾರಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ವಸತಿ ಸಮುಚ್ಛಯದ ಎಲ್ಲ ಘಟಕಗಳ ನಿವಾಸಿಗಳು ಅಥವಾ ಶೇಕಡ 50 ರಷ್ಟು ಘಟಕಗಳ ನಿವಾಸಿಗಳು ಒಂದೇ ಬಾರಿಗೆ ನೋಂದಣಿಗೆ ಅರ್ಜಿ ಸಲ್ಲಿಸಿದಲ್ಲಿ ಮಾತ್ರ ಸೇವೆ ಒದಗಿಸುವುದಾಗಿ ಹೇಳಲಾಗಿತ್ತು. ಎಲ್ಲರೂ ಒಂದೇ ಬಾರಿಗೆ ರ್ಜಿಸಲ್ಲಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಕಾಲ ಯೋಜನೆಯಡಿ ನಾಗರಿಕರಿಗೆ ಅನುಕೂಲವಾಗುವಂತೆ ಈ ಸೇವೆಯನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಇದರಿಂದ ಖಾತಾ ನೋಂದಣಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...