alex Certify ಸುಧಾರಣೆಗಳ ಫಲದಿಂದ ಬ್ಯಾಂಕುಗಳಿಗೆ ಮರಳಿತು 5.5 ಲಕ್ಷ ಕೋಟಿ ರೂ. ಸಾಲದ ಮೊತ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಧಾರಣೆಗಳ ಫಲದಿಂದ ಬ್ಯಾಂಕುಗಳಿಗೆ ಮರಳಿತು 5.5 ಲಕ್ಷ ಕೋಟಿ ರೂ. ಸಾಲದ ಮೊತ್ತ

ಕಳೆದ ಕೆಲ ವರ್ಷಗಳಿಂದ ಮರುಪಾವತಿ ಆಗದೇ ಉಳಿದಿದ್ದ ಸಾಲಗಳನ್ನು ಹಿಂಪಡೆಯಲು ಸರ್ಕಾರ ತೆಗೆದುಕೊಂಡ ಕ್ರಮಗಳು ನಿಧಾನವಾಗಿ ಫಲಕೊಡುತ್ತಿದ್ದು, ದೇಶಾದ್ಯಂತ 5.5 ಲಕ್ಷ ಕೋಟಿ ರೂಪಾಯಿಗಳ ಕೆಟ್ಟ ಸಾಲವನ್ನು ಚುಕ್ತಾ ಮಾಡಿಕೊಳ್ಳಲು ಸಫಲವಾಗಿವೆ. ತಾಂತ್ರಿಕವಾಗಿ ಹಿಂಪಡೆಯಲು ಸಾಧ್ಯವೇ ಇಲ್ಲವೆಂದು ನಿರ್ಧರಿಸಲಾಗಿದ್ದ ಒಂದು ಲಕ್ಷ ಕೋಟಿ ರೂಪಾಯಿ ಸಾಲವೂ ಇದರಲ್ಲಿ ಸೇರಿದೆ.

ಮಾರ್ಚ್ 2018ರಿಂದ ಇಲ್ಲಿವರೆಗೂ 3.1 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಚುಕ್ತಾ ಮಾಡಿಕೊಳ್ಳಲಾಗಿದೆ. ಇದೇ ವೇಳೆ; ಭೂಷಣ್ ಸ್ಟೀಲ್, ಎಸ್ಸಾರ್‌ ಸ್ಟೀಲ್‌ಗಳಂಥ ಸಂಸ್ಥೆಗಳಿಂದ ಮರಳಿ ಬರಬೇಕಿದ್ದ 99,996 ಕೋಟಿ ರೂಪಾಯಿಗಳಷ್ಟು ಹಣವನ್ನೂ ಸಹ ಹಿಂಪಡೆಯಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೊದಲು ಇದನ್ನು ತಿಳಿಯಿರಿ: ಅಕ್ಟೋಬರ್ ನಿಂದ ಬದಲಾಗ್ತಿದೆ ನಿಯಮ

2019ರ ವಿತ್ತೀಯ ವರ್ಷದಲ್ಲಿ 1.2 ಲಕ್ಷ ಕೋಟಿ ರೂಪಾಯಿಗಳನ್ನು ಮರಳಿ ಪಡೆಯಲಾಗಿದೆ.

ಪ್ರತ್ಯೇಕವಾಗಿ; ಕಿಂಗ್‌ಫಿಶರ್‌ನಂಥ ಕಂಪನಿಗಳಿಂದ ಬರಬೇಕಿದ್ದ ಸಾಲವನ್ನು ಸಹ ಒಂದು ಹಂತಕ್ಕೆ ರಿಕವರ್‌ ಮಾಡಲಾಗಿದೆ.

“ಆರ್‌ಬಿಐ ನಿಗದಿಪಡಿಸಿರುವ ನಿಯಮಾವಳಿಗಳ ಅನುಸಾರ ಸಾಲ ಹಿಂಪಡೆಯುವ ಕೆಲಸ ಮಾಡಲಾಗಿದೆ. ಸಾಲ ಮರಳಿ ಬರುವ ಸಾಧ್ಯತೆ ಇಲ್ಲ ಎಂದು ದಾಖಲೆಗಳಲ್ಲಿ ಬರೆಯಲಾಗಿರುವ ಪ್ರಕರಣಗಳಲ್ಲೂ, ಸಾಲದ ಹಣ ಮರಳಿ ಪಡೆಯಲು ಸಕಲ ಯತ್ನಗಳನ್ನು ಮಾಡಲಾಗಿದೆ” ಎಂದು ಬ್ಯಾಂಕಿಂಗ್ ಕ್ಷೇತ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...