alex Certify ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬಂದಿದೆ ರೆಡ್ಮಿಯ ಸ್ಮಾರ್ಟ್ ಟಿವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಯಲ್ಲಿ ಧಮಾಲ್ ಮಾಡಲು ಬಂದಿದೆ ರೆಡ್ಮಿಯ ಸ್ಮಾರ್ಟ್ ಟಿವಿ

ದೊಡ್ಡ ಪರದೆಯ ಟಿವಿ ಖರೀದಿಸುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಕೆಲ ದಿನಗಳ ಹಿಂದೆ ಚೀನಾದಲ್ಲಿ ಶಿಯೋಮಿ ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022ನ್ನು ಬಿಡುಗಡೆ ಮಾಡಲಾಗಿದೆ. 50 ಇಂಚಿನ ಟಿವಿ ಈಗ ಖರೀದಿಗೆ ಲಭ್ಯವಿದೆ. ಈ ಟಿವಿ ಬೆಲೆ ಚೀನಾದಲ್ಲಿ 2,299 ಯುವಾನ್‌. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಜೆಡಿ ಡಾಟ್ ಕಾಮ್ ನಲ್ಲಿ ಇದು ಲಭ್ಯವಿದೆ.

ರೆಡ್ ಮಿ ಸ್ಮಾರ್ಟ್ ಟಿವಿ ಎಕ್ಸ್ 2022 ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಇದು 3840 x 2160 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಹೊಂದಿದೆ. 50 ಇಂಚಿನ 4ಕೆ ಡಿಸ್‌ಪ್ಲೇಯನ್ನು ನೀಡಲಾಗಿದೆ. 3ಜಿಬಿ ರ್ಯಾಮ್ ಮತ್ತು 32ಜಿಬಿ ಸ್ಟೋರೇಜ್ ಇದಕ್ಕೆ ನೀಡಲಾಗಿದೆ. ಎಡ ಮತ್ತು ಬಲ ಚಾನಲ್‌ಗಳಲ್ಲಿ ಎರಡು 12.5ಡಬ್ಲ್ಯು ಸ್ಪೀಕರ್‌ಗಳನ್ನು ಟಿವಿಗೆ ನೀಡಲಾಗಿದೆ.

ಇದಕ್ಕೂ ಮೊದಲು, ಕಂಪನಿಯು 65-ಇಂಚಿನ ಡಿಸ್ಪ್ಲೇ ಮತ್ತು 55-ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿರುವ ಎರಡು ಮಾಡೆಲ್ ಬಿಡುಗಡೆ ಮಾಡಿದೆ. ಈ ಎರಡೂ ಮಾಡೆಲ್ ಗಳು ಈಗಾಗಲೇ ಚೀನೀ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...