alex Certify BREAKING: ಬೆಂಗಳೂರಲ್ಲಿ 16.5 ಲಕ್ಷ ರೂ. ಮೌಲ್ಯದ 330 ಕೆಜಿ ರಕ್ತಚಂದನ ತುಂಬಿದ್ದ ವಾಹನ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೆಂಗಳೂರಲ್ಲಿ 16.5 ಲಕ್ಷ ರೂ. ಮೌಲ್ಯದ 330 ಕೆಜಿ ರಕ್ತಚಂದನ ತುಂಬಿದ್ದ ವಾಹನ ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ರಕ್ತಚಂದನ ತುಂಬಿದ್ದ ವಾಹನ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ತಚಂದನ ತುಂಬಿದ ವಾಹನ ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.

ಕಾಮಾಕ್ಷಿಪಾಳ್ಯದ ಕಾವೇರಿ ಗುಡ್ಡ ಸಮೀಪ ರಕ್ತಚಂದನ ತುಂಬಿದ ವಾಹನ ವಶಕ್ಕೆ ಪಡೆಯಲಾಗಿದ್ದು, ಸಿದ್ದಪ್ಪ, ಹರೀಶ, ಪೊನ್ನರಾಜು, ಧ್ರುವಕುಮಾರ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ 16.5 ಲಕ್ಷ ರೂಪಾಯಿ ಮೌಲ್ಯದ 330 ಕೆಜಿ ರಕ್ತಚಂದನ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...