ಯಾವುದೇ ಪದವಿ ಇಲ್ಲದೇ ನಿಮಗೆ ಒಳ್ಳೆಯ ಸಂಬಳವುಳ್ಳ ಕೆಲಸ ಸಿಗೋದು ಕನಸಿನ ಮಾತೇ ಸರಿ. ಆದರೆ ಇಲ್ಲೊಂದು ಉದ್ಯೋಗದಾತರು ಈ ಮಾತಿಗೆ ಸಂಪೂರ್ಣ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ.
ಟಿಕ್ಟಾಕ್ ವಿಡಿಯೋವೊಂದರಲ್ಲಿ ಎಲೆನಿ ಎಂಬವರು ಇಂತಹದ್ದೊಂದು ವಿಶೇಷ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎಲೆನಿ, ಪದವಿಯನ್ನೇ ಪಡೆಯದವರಿಗೆ ಕೈ ತುಂಬಾ ಸಂಬಳ ನೀಡುವ ಕೆಲಸದ ಬಗ್ಗೆ ವಿವರಣೆ ನೀಡಿದ್ದಾರೆ.
ಇದೊಂದು ಡೇಟಾ ಅನಾಲಿಸ್ಟ್ ಕೆಲಸವಾಗಿದೆ. ಈ ಕೆಲಸದಲ್ಲಿ ನೀವು ಯಾವುದಾದರೂ ಅಪ್ಲಿಕೇಶನ್ ಅಥವಾ ಸಾಮಾಜಿಕ ಜಾಲತಾಣ ವೇದಿಕೆಯ ಯಶಸ್ಸನ್ನು ನೀವು ತುಲನೆ ಮಾಡುತ್ತೀರಾ. ಉದಾಹರಣೆಗೆ ನೀವು ಟಿಕ್ಟಾಕ್ನಲ್ಲಿ ಕೆಲಸ ಮಾಡುವುದಾದರೆ ಅಪ್ಲಿಕೇಶನ್ನ ಯಾವ ಭಾಗವನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಹಾಗೂ ಯಾವುದನ್ನು ಜನರು ಇಷ್ಟ ಪಡುತ್ತಿಲ್ಲ ಎಂಬದುರ ಬಗ್ಗೆ ಕಣ್ಣಿಡಬೇಕು.
ಯಾವ ಭಾಗವನ್ನು ಜನರು ಬಳಕೆ ಮಾಡಲು ಆಸಕ್ತಿ ತೋರುತ್ತಿಲ್ಲವೋ ಅದನ್ನು ಜನರು ಬಳಕೆ ಮಾಡುವಂತೆ ಮಾಡಲು ಯಾವ ರೀತಿಯಲ್ಲಿ ಅಪ್ಲಿಕೇಶನ್ನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ನೀವು ಕಂಪನಿಗೆ ಸಲಹೆಗಳನ್ನು ನೀಡಬೇಕು.
ಈ ಕೆಲಸದ ಇನ್ನೊಂದು ದೊಡ್ಡ ವಿಶೇಷತೆ ಏನೆಂದರೆ ಈ ಉದ್ಯೋಗವನ್ನು ಪಡೆಯಲು ನೀವು ಯಾವುದೇ ಪದವಿಯನ್ನು ಹೊಂದಿರುವ ಅವಶ್ಯಕತೆ ಇರೋದಿಲ್ಲ. ಆದರೆ ಈ ಕೆಲಸವನ್ನು ಹೊಂದುವ ವ್ಯಕ್ತಿಯು 61 ಲಕ್ಷ ರೂಪಾಯಿಗಳವರೆಗೆ ಸಂಪಾದನೆ ಮಾಡಬಹುದಾಗಿದೆ. ಡೇಟಾ ಅನಾಲಿಸ್ಟ್ ಕಡಿಮೆ ಎಂದರೂ 33 ಲಕ್ಷ ರೂಪಾಯಿಗಳನ್ನಂತೂ ಗಳಿಸುತ್ತಾರೆ. ಈ ಕೆಲಸಕ್ಕಾಗಿ ನೀವು ಉತ್ತಮ ಕೌಶಲ್ಯವನ್ನು ಹೊಂದಿದ್ದರೆ ಅಷ್ಟೇ ಸಾಕು ಎಂದು ಎಲಾನಿ ವಿವರಿಸಿದ್ದಾರೆ.
ಇದೊಂದು ಅನಾಲಿಸ್ಟ್ ಕೆಲಸವಾದ್ದರಿಂದ ಇಲ್ಲಿ ಯಾವುದೇ ಪದವಿಯ ಅಗತ್ಯ ಇರೋದಿಲ್ಲ. ಉತ್ತಮ ಸಂವಹನ ಕೌಶಲ್ಯವೊಂದೇ ಈ ಕೆಲಸಕ್ಕೆ ಬೇಕಾದ ಪ್ರಮುಖ ಅಸ್ತ್ರ ಎಂದು ಎಲಾನಿ ಹೇಳಿದ್ದಾರೆ.
ಕಂಪನಿಗಳು ಈ ಕೆಲಸಕ್ಕೆ ಉದ್ಯೋಗಿಗಳನ್ನು 2020ರಲ್ಲೇ ನೇಮಿಸಿಕೊಳ್ಳಲು ಮುಂದಾಗಿದ್ದವು. ಆದರೆ ಕೊರೊನಾ ಕಾರಣದಿಂದ ಈ ಖರ್ಚನ್ನು ಹೊಂದಿಸಲು ಕಂಪನಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷದಲ್ಲಿ ಈ ಕೆಲಸಕ್ಕೆ ನೇಮಕಾತಿ ನಡೆಯಲಿದೆ. ಕಾಲೇಜಿಗೆ ಹೋಗಲು ಬಯಸದೇ ಇರುವವರಿಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವೇ ಸರಿ ಎಂದು ಎಲಾನಿ ವಿವರಿಸಿದ್ದಾರೆ.