alex Certify BIG NEWS: ಒಂದೇ ತಿಂಗಳಲ್ಲಿ 31,637 ಖಾತೆ ನಿಷ್ಕ್ರಿಯಗೊಳಿಸಿದ ಟ್ವಿಟರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ತಿಂಗಳಲ್ಲಿ 31,637 ಖಾತೆ ನಿಷ್ಕ್ರಿಯಗೊಳಿಸಿದ ಟ್ವಿಟರ್‌

Received 120 Grievances, Actioned 167 URLs During Jun 26-Jul 25: Twitter

ಜೂನ್ 26-ಜುಲೈ 25ರ ನಡುವಿನ ಒಂದು ತಿಂಗಳ ಅವಧಿಯಲ್ಲಿ 120 ದೂರುಗಳನ್ನು ಸ್ವೀಕರಿಸಿದ್ದು, 167 ಯುಆರ್‌ಎಲ್‌ಗಳ ಮೇಲೆ ಕ್ರಮ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್‌ ತಿಳಿಸಿದೆ.

ಐಟಿ ನಿಯಮಗಳ ಅನ್ವಯ ವರದಿ ಸಲ್ಲಿಸಿರುವ ಟ್ವಿಟರ್‌, ಇದೇ ಅವಧಿಯಲ್ಲಿ ತನ್ನ ಜಾಲತಾಣದಲ್ಲಿ ಬರುವ ಸರಕನ್ನು ಪರಿಶೀಲನೆ ಮಾಡುವ ಸಂದರ್ಭ 31,637 ಖಾತೆಗಳನ್ನು ನಿಷ್ಕ್ರಿಯಗೊಳಿಸಿರುವುದಾಗಿ ತಿಳಿಸಿದೆ.

ದೂರುಗಳನ್ನು ಸ್ವೀಕರಿಸಲೆಂದೇ ವಿಶೇಷ ಅಧಿಕಾರಿಯೊಬ್ಬರನ್ನು ಟ್ವಿಟರ್‌ ನೇಮಕ ಮಾಡಿದ್ದು, ಕೋರ್ಟ್ ಆದೇಶಾನುಸಾರ ದೂರುಗಳನ್ನು ತಂದ ವೈಯಕ್ತಿಕ ಬಳಕೆದಾರರ ಪ್ರಶ್ನೆಗಳನ್ನೂ ಸ್ವೀಕರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಕಿರುಕುಳ/ದೌರ್ಜನ್ಯ, ತಪ್ಪು ಮಾಹಿತಿ ಹಬ್ಬಿಸುವುದು, ಮಾನಹಾನಿ ಹಾಗೂ ಐಪಿ ಸಂಬಂಧಿ ಒಳತೂರುವಿಕೆ, ದ್ವೇಷದ ಸರಕು, ಬೇರೊಬ್ಬರ ನಕಲಿ ಖಾತೆ ಸೃಷ್ಟಿಸುವುದು, ವಯಸ್ಕರ ಸೂಕ್ಷ್ಮ ಸರಕು, ಖಾಸಗಿತನದ ಉಲ್ಲಂಘನೆ ಹಾಗೂ ಭಯೋತ್ಪಾದನೆ/ತೀವ್ರವಾದದ ಸರಕುಗಳು ಇರುವುದಾಗಿ ಈ ದೂರುಗಳ ಮೂಲಕ ರಿಪೋರ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...