alex Certify Video | ಪೆಟ್ರೋಲ್ ಬಂಕ್ ನಲ್ಲಿ ಲಾರಿಗೆ ಇದ್ದಕ್ಕಿದ್ದಂತೆ ಹೊತ್ತಿದ ಬೆಂಕಿ; ಮುಂದಾಗಿದ್ದು ಅಚ್ಚರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಪೆಟ್ರೋಲ್ ಬಂಕ್ ನಲ್ಲಿ ಲಾರಿಗೆ ಇದ್ದಕ್ಕಿದ್ದಂತೆ ಹೊತ್ತಿದ ಬೆಂಕಿ; ಮುಂದಾಗಿದ್ದು ಅಚ್ಚರಿ

'Real hero': Employee single-handedly puts out fire at petrol pump; earns praise

ಪೆಟ್ರೋಲ್ ಬಂಕ್ ನಲ್ಲಿ ಲಾರಿಯೊಂದಕ್ಕೆ ದಿಢೀರನೆ ಬೆಂಕಿ ಹೊತ್ತಿಕೊಂಡಾಗ ಎಲ್ಲರೂ ಗಾಬರಿಯಿಂದ ಓಡಿಹೋಗುವುದು ಸಾಮಾನ್ಯ. ಆದರೆ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಬ್ಬಂದಿಯೊಬ್ಬರು ಇಂತಹ ಅವಘಡದ ವೇಳೆ ಧೈರ್ಯ ತೋರಿ ಮೆಚ್ಚುಗೆ ಗಳಿಸಿದ್ದಾರೆ. ಅವಘಡದ ಸಂದರ್ಭದಲ್ಲಿ ಆತನ ಕ್ಷಿಪ್ರ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಶಂಸೆ ಪಡೆದಿದೆ.

ಅಶುತೋಷ್ ಶರ್ಮಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಅದರಲ್ಲಿ ಪೆಟ್ರೋಲ್ ಬಂಕ್ ನಲ್ಲಿ ತೈಲ ಹಾಕಿಸಿಕೊಳ್ಳಲು ಒಂದು ಲಾರಿ ನಿಂತಿರುತ್ತದೆ. ಇದೇ ವೇಳೆ ಮತ್ತೊಂದು ಲಾರಿ ತೈಲ ಹಾಕಿಸಿಕೊಳ್ಳಲು ಬಂಕ್ ಪ್ರವೇಶಿಸುತ್ತದೆ. ಈ ವೇಳೆ ಇದ್ದಕ್ಕಿದ್ದಂತೆ ಲಾರಿಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ಅವಘಡಕ್ಕೆ ಬೆದರಿ ಕೆಲವರು ಓಡಿಹೋದರೆ ಓರ್ವ ಸಿಬ್ಬಂದಿ ತಕ್ಷಣ ಪರಿಸ್ಥಿತಿ ಹದಗೆಡದಂತೆ ರಕ್ಷಣೆಗೆ ಮುಂದಾಗುತ್ತಾರೆ. ತಕ್ಷಣ fire extinguisher ಬಳಸಿ ಬೆಂಕಿಯನ್ನು ನಂದಿಸಲು ಪ್ರಾರಂಭಿಸುತ್ತಾರೆ.

ತೆಲಂಗಾಣದ ಯದ್ರಾದ್ರಿಯಲ್ಲಿ ನಡೆಯಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ ಪೆಟ್ರೋಲ್ ಪಂಪ್ ನೌಕರನ ಸಮರ್ಪಣಾ ಮನೋಭಾವವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಂತಹ ಶೌರ್ಯಕ್ಕೆ ಪ್ರತ್ಯೇಕ ಪ್ರಶಸ್ತಿ ಬೇಕು, ಅವನಿಗೆ ಖಂಡಿತವಾಗಿಯೂ ಪುರಸ್ಕಾರ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...