ಅಡುಗೆಗೆ ತಯಾರಾದ ಸ್ಥಿತಿಯಲ್ಲಿರುವ ದೋಸೆ, ಇಡ್ಲಿ, ಅಂಬಲಿಯ ಮಿಕ್ಸ್ ಪುಡಿಗಳ ಮೇಲೆ 18%ನಷ್ಟು ಜಿಎಸ್‌ಟಿ ವಿಧಿಸಬಹುದಾಗಿದ್ದು, ಇವೇ ವಸ್ತುಗಳನ್ನು ಸಂಪಣ/ಹಿಟ್ಟಿನ ರೂಪದಲ್ಲಿ ಮಾರುವುದಾದರೆ 5% ಮಾತ್ರವೇ ಜಿಎಸ್‌ಟಿ ಅನ್ವಯವಾಗುತ್ತದೆ.
ಬಾಜ್ರಾ, ಜೋಳ, ರಾಗಿ, ಬಹುಧಾನ್ಯದ ಅಂಬಲಿ ಮಿಕ್ಸ್ ಸೇರಿದಂತೆ 49 ಉತ್ಪನ್ನಗಳ ಮೇಲೆ ಜಿಎಸ್‌ಟಿ ಅನ್ವಯವಾಗುವಂತೆ ಆದೇಶ ನೀಡಲು ಕೋರಿ ಕೃಷ್ಣ ಭವನ್ ಫುಡ್ಸ್ ಮತ್ತು ಸ್ವೀಟ್ಸ್ ಮುಂಗಡ ಆದೇಶ ಪ್ರಾಧಿಕಾರದ (ಎಎಆರ್) ತಮಿಳುನಾಡಿನ ಪೀಠಕ್ಕೆ ಮೊರೆ ಹೋಗಿತ್ತು.
ʼವಾಟ್ಸಾಪ್ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ
“ದೋಸೆ ಹಾಗೂ ಇಡ್ಲಿ ಮಿಕ್ಸ್‌ಗಳನ್ನು ಮಿಕ್ಸ್‌ಗಳ ರೂಪದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಇವುಗಳನ್ನು ನೀರಿನಲ್ಲಿ ಬೆರೆಸಿ ಹಿಟ್ಟು ಮಾಡಿಕೊಂಡು ಬಳಸಬೇಕಾಗುತ್ತದೆ…..ಆದೇಶಕ್ಕೆ ಕೋರಿ ಉಲ್ಲೇಖಿಸಲಾಗಿರುವ ಎಲ್ಲಾ 49 ಉತ್ಪನ್ನಗಳನ್ನು ಸಿಟಿಎಚ್2016ರ ಅಡಿ ವರ್ಗೀಕರಿಸಬಹುದಾಗಿದ್ದು, ಇವುಗಳ ಮೇಲೆ 9% ಕೇಂದ್ರ ಜಿಎಸ್‌ಟಿ ಹಾಗೂ 9% ರಾಜ್ಯ ಜಿಎಸ್‌ಟಿ ಅನ್ವಯವಾಗುತ್ತದೆ” ಎಂದು ಎಎಆರ್ ಆದೇಶ ನೀಡಿದೆ.
ಒಂದೇ ಉತ್ಪನ್ನವನ್ನು ಪುಡಿ ಹಾಗೂ ಹಿಟ್ಟಿನ ರೂಪದಲ್ಲಿ ಮಾರಾಟ ಮಾಡಿದರೆ ಭಿನ್ನವಾದ ತೆರಿಗೆಗಳು ಅನ್ವಯವಾಗುತ್ತವೆ: ಇಂಥ ಆದೇಶಗಳಿಂದ ತೆರಿಗೆ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತದೆ ಎನ್ನುತ್ತಾರೆ ತೆರಿಗೆ ತಜ್ಞ ಅಭಿಷೇಕ್ ಜೈನ್.