alex Certify ಐಪಿಎಲ್ ವೇಳೆ ಕೈತಪ್ಪಿದ ಆರ್‌ಸಿಬಿ ಅಭಿಮಾನಿಯ ಚಾಟ್ಸ್; ನೆಟ್‌ನಲ್ಲಿ ಅದರದ್ದೇ ಸದ್ದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ವೇಳೆ ಕೈತಪ್ಪಿದ ಆರ್‌ಸಿಬಿ ಅಭಿಮಾನಿಯ ಚಾಟ್ಸ್; ನೆಟ್‌ನಲ್ಲಿ ಅದರದ್ದೇ ಸದ್ದು…!

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಲಿಲ್ಲ. ಆದರೆ ವಿವಾದಾತ್ಮಕ ತೀರ್ಪಿಗೆ ಔಟಾಗಿ ಬೇಸರದಲ್ಲೇ ನಿರ್ಗಮಿಸಿದ್ದರು. ಇದೇ ವೇಳೆ ಪೆವಿಲಿಯನ್‌ನಲ್ಲಿನ ಒಂದು ನಿರಾಸೆ ಘಟನೆ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಬಗ್ಗುಬಡಿಯಿತು.‌

IPL: ಸತತ ಸೋಲಿನಿಂದ ಕಂಗೆಟ್ಟ ಮುಂಬೈ ಮಣಿಸಲು RCB ಸಜ್ಜು

ಪಂದ್ಯದ ಕೊನೆಯ ಘಟ್ಟದಲ್ಲಿ ಆರ್‌ಸಿಬಿ ಮಾಜಿ ನಾಯಕ ಕೊಹ್ಲಿ ಔಟಾಗಿ ನಿರಾಸೆಯಿಂದ ಹೊರಹೋಗುವ ಮುನ್ನ ಸ್ಟ್ಯಾಂಡ್‌ನಲ್ಲಿ ಆರ್‌ಸಿಬಿ ಜರ್ಸಿ ಧರಿಸಿದ ಯುವ ಅಭಿಮಾನಿಯ ಕೈಯಲ್ಲಿದ್ದ ಕುರುಕಲು ಸಂಭ್ರಮದ ಅಬ್ಬರದಲ್ಲಿದ್ದಾಗ ಕೈಜಾರಿ ಮುಖ ಸಪ್ಪಗಾಗಿತ್ತು. ಈ ಘಳಿಗೆಯು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.

ಆರ್‌ಸಿಬಿ ಪರ ಉತ್ತಮ ಹೊಡೆತ ಬಂದಾಗ ಯುವ ಅಭಿಮಾನಿ ಸೇರಿದಂತೆ ಸುತ್ತಮುತ್ತಲಿನ ಎಲ್ಲರೂ ಸಂಭ್ರಮಿಸುತ್ತಿದ್ದರು, ಆಗ ಅವನ ಕೈಯಿಂದ ಕುರುಕಲು ಆಕಸ್ಮಿಕವಾಗಿ ಜಾರಿ ಬಿತ್ತು. ಈ ವಿಡಿಯೋ ಕಂಡ ನೆಟ್ಟಿಗರು ರಂಜನೀಯ ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...