alex Certify BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಘೋಷಣೆ ಮಾಡಿದೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ ನಿರ್ವಹಿಸುವ ಐಎಂಪಿಎಸ್ ಒಂದು ಪ್ರಮುಖ ಪಾವತಿ ವ್ಯವಸ್ಥೆಯಾಗಿದೆ. ಇದು ದೇಶೀಯ ಹಣವನ್ನು ತ್ವರಿತಗತಿಯಲ್ಲಿ ವರ್ಗಾವಣೆ ಮಾಡಲು ನೆರವಾಗುತ್ತದೆ.

44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ

ಆರ್ಬಿಐ, ಎರಡು ತಿಂಗಳಿಗೊಮ್ಮೆ ವಿತ್ತೀಯ ನೀತಿ ಪರಿಶೀಲನೆ ನಡೆಸುತ್ತದೆ. ವಿತ್ತೀಯ ನೀತಿ ಪರಿಶೀಲನೆ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಐಎಂಪಿಎಸ್ ವ್ಯವಸ್ಥೆಯ ಪ್ರಾಮುಖ್ಯತೆ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಪ್ರತಿ ವಹಿವಾಟು ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.

ಇದು ಡಿಜಿಟಲ್ ಪಾವತಿಯನ್ನು ಮತ್ತಷ್ಟು ಉತ್ತೇಜಿಸಲಿದೆ. ಗ್ರಾಹಕರು 2 ಲಕ್ಷಕ್ಕಿಂತ ಹೆಚ್ಚಿನ ಡಿಜಿಟಲ್ ಪಾವತಿಯನ್ನು ಇದ್ರಿಂದ ಸುಲಭವಾಗಿ ಮಾಡಬಹುದಾಗಿದೆ. ಇದಲ್ಲದೆ,  ದೇಶಾದ್ಯಂತ ಆಫ್‌ಲೈನ್ ಮೋಡ್‌ನಲ್ಲಿ ರಿಟೇಲ್ ಡಿಜಿಟಲ್ ಪಾವತಿ ಪರಿಚಯಿಸಲು ಆರ್ಬಿಐ ಮುಂದಾಗಿದೆ.

ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ.

ಪ್ರಾಯೋಗಿಕ ಪ್ರಯೋಗದ ವೇಳೆ ಉತ್ತಮ ಪ್ರೋತ್ಸಾಹ ಸಿಕ್ಕಿದ್ದು, ದೇಶಾದ್ಯಂತ ಆಫ್‌ಲೈನ್ ಮೋಡ್ ಮೂಲಕ ಚಿಲ್ಲರೆ ಡಿಜಿಟಲ್ ಪಾವತಿ ಪರಿಚಯಿಸಲು ಮುಂದಾಗಿದ್ದೇವೆ. ಇದು ಡಿಜಿಟಲ್ ಪಾವತಿಗಳ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹೊಸ ವ್ಯವಹಾರಕ್ಕೆ ಉತ್ತೇಜನ ನೀಡಲಿದೆ ಎಂದವರು ಹೇಳಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...