alex Certify ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ.

ಕೊರೊನಾದಿಂದಾಗಿ ಅನೇಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡಲು ಅವರ ಬಳಿ ಹಣವಿಲ್ಲ. ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ ವ್ಯವಹಾರವನ್ನು ಜನರು ಹುಡುಕ್ತಿದ್ದಾರೆ. ಅಂತವರಿಗೆ ಈ ವ್ಯವಹಾರ ಬೆಸ್ಟ್.

ಇತ್ತೀಚಿನ ದಿನಗಳಲ್ಲಿ ಮುತ್ತು ಕೃಷಿಯ ಮೇಲೆ ಜನರ ಗಮನ ವೇಗವಾಗಿ ಹೆಚ್ಚಾಗಿದೆ. 25 ಸಾವಿರ ರೂಪಾಯಿ ಹೂಡಿಕೆ ಮಾಡಿ ವ್ಯಾಪಾರವನ್ನು ಆರಂಭಿಸಬಹುದು. ಪ್ರತಿ ತಿಂಗಳು 3 ಲಕ್ಷ ರೂಪಾಯಿವರೆಗೆ ಗಳಿಸಬಹುದು. ಜೊತೆಗೆ ಸರ್ಕಾರದಿಂದ ಶೇಕಡಾ 50ರಷ್ಟು ಸಹಾಯ ಸಿಗುತ್ತದೆ.

ಇದಕ್ಕೆ ಒಂದು ಕೊಳ, ಸಿಂಪಿಗಳು ಮತ್ತು ತರಬೇತಿ ಅಗತ್ಯ. ಸ್ವಂತ ಖರ್ಚಿನಲ್ಲಿ ಕೊಳವನ್ನು ಅಗೆಯಬಹುದು. ಸರ್ಕಾರ ಇದಕ್ಕೆ ಶೇಕಡಾ 50ರಷ್ಟು ಸಬ್ಸಿಡಿ ನೀಡುತ್ತದೆ. ಸಿಂಪಿಗಳು ಭಾರತದ ಹಲವು ರಾಜ್ಯಗಳಲ್ಲಿ ಲಭ್ಯವಿದೆ. ದಕ್ಷಿಣ ಭಾರತ ಮತ್ತು ಬಿಹಾರದ ಸಿಂಪಿಗಳ ಗುಣಮಟ್ಟ ಉತ್ತಮವಾಗಿದೆ. ದೇಶದ ಹಲವು ಕಡೆ ತರಬೇತಿ ಲಭ್ಯವಿದೆ. ಮಧ್ಯಪ್ರದೇಶದ ಹೋಶಂಗಾಬಾದ್ ಮತ್ತು ಮುಂಬೈನಿಂದ ಮುತ್ತು ಕೃಷಿ ತರಬೇತಿ ಪಡೆಯಬಹುದು.

ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್

ಸಿಂಪಿಗಳನ್ನು ಬಲೆಯಲ್ಲಿ ಕಟ್ಟಿ 10 ರಿಂದ 15 ದಿನಗಳ ಕಾಲ ಕೆರೆಯಲ್ಲಿ ಹಾಕಲಾಗುತ್ತದೆ. ನಂತರ ಅವುಗಳನ್ನು ಹೊರತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಎಂದರೆ ಸಿಂಪಿ ಒಳಗೆ ಒಂದು ಕಣ ಅಥವಾ ಅಚ್ಚನ್ನು ಸೇರಿಸಲಾಗುತ್ತದೆ. ನಂತರ ಸಿಂಪಿ ಪದರವನ್ನು ತಯಾರಿಸಲಾಗುತ್ತದೆ.

ಒಂದು ಸಿಂಪಿಯನ್ನು ತಯಾರಿಸಲು 25 ರಿಂದ 35 ರೂಪಾಯಿ ವೆಚ್ಚವಾಗುತ್ತದೆ. ಆದರೆ ಸಿದ್ಧತೆಯ ನಂತರ, ಎರಡು ಮುತ್ತುಗಳು ಸಿಂಪಿಯಿಂದ ಹೊರಬರುತ್ತವೆ. ಒಂದು ಮುತ್ತು ಕನಿಷ್ಠ 120 ರೂಪಾಯಿಗೆ ಮಾರಾಟವಾಗುತ್ತದೆ. ಗುಣಮಟ್ಟ ಉತ್ತಮವಾಗಿದ್ದರೆ 200 ರೂಪಾಯಿಗಳಿಗಿಂತ ಹೆಚ್ಚಿನ ಬೆಲೆ ಸಿಗುತ್ತದೆ.

GOOD NEWS: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಕುಸಿತ; ಕಳೆದ 205 ದಿನಗಳಲ್ಲೇ ಅತಿ ಕಡಿಮೆ ಆಕ್ಟೀವ್ ಕೇಸ್ ದಾಖಲು

ಒಂದು ಎಕರೆ ಹೊಂಡದಲ್ಲಿ 25 ಸಾವಿರ ಚಿಪ್ಪುಗಳನ್ನು ಹಾಕಿದರೆ ಅದಕ್ಕೆ ಸುಮಾರು 8 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ತಯಾರಿಕೆಯಲ್ಲಿ ಕೆಲವು ಸಿಂಪಿಗಳು ವ್ಯರ್ಥವಾಗಿದ್ದರೂ, ಶೇಕಡಾ 50 ಕ್ಕಿಂತ ಹೆಚ್ಚು ಸಿಂಪಿಗಳು ಸುರಕ್ಷಿತವಾಗಿ ಹೊರಬರುತ್ತವೆ. ಇದರಿಂದ ವಾರ್ಷಿಕವಾಗಿ 30 ಲಕ್ಷ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...