alex Certify RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RBI ನ ಹೊಸ ಒಂಬುಡ್ಸ್‌ಮನ್‌ ಯೋಜನೆ: ಆನ್ಲೈನ್ ಮೂಲಕ ಸುಲಭವಾಗಿ ದೂರು ಸಲ್ಲಿಸಲು ಹೀಗೆ ಮಾಡಿ

ರಿಸರ್ವ್ ಬ್ಯಾಂಕ್‌- ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಯೋಜನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಳೆದ ವಾರ ಚಾಲನೆ ನೀಡಿದ್ದಾರೆ.

ಈ ಯೋಜನೆಯು ಆರ್‌.ಬಿ.ಐ.ನ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಳಗೊಂಡಿದೆ — ಬ್ಯಾಂಕಿಂಗ್ ಒಂಬುಡ್ಸ್‌ಮನ್ ಯೋಜನೆ, 2006; ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳಿಗೆ ಯೋಜನೆ, 2018; ಮತ್ತು ಡಿಜಿಟಲ್ ವ್ಯವಹಾರಗಳಿಗೆ ಒಂಬುಡ್ಸ್‌ಮನ್ ಯೋಜನೆ, 2019.

1. ರಿಸರ್ವ್ ಬ್ಯಾಂಕ್‌ನ ಸಮಗ್ರ ಒಂಬುಡ್ಸ್‌ಮನ್ ಯೋಜನೆಯು ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಬ್ಯಾಂಕುಗಳು, ಶೆಡ್ಯೂಲ್ ಆಗಿರುವ ಪ್ರಾಥಮಿಕ (ನಗರ) ಸಹಕಾರ ಬ್ಯಾಂಕುಗಳು, ಶೆಡ್ಯೂಲ್ ಅಲ್ಲದಿರುವ ಪ್ರಾಥಮಿಕ (ನಗರ) ಸಹಕಾರ ಬ್ಯಾಂಕುಗಳು, 50 ಕೋಟಿ ರೂ.ಗಳ ವರೆಗೆ ಹೂಡಿಕೆಯ ಗಾತ್ರ ಹಾಗೂ ಅದಕ್ಕಿಂತ ಮೀರಿದ್ದು, ಒಳಗೊಂಡಿದೆ.

ಲಾರಿ-ಬೈಕ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ದಂಪತಿ ದುರ್ಮರಣ

2. ಎಲ್ಲಾ ಬ್ಯಾಂಕಿಂಗ್‌ಯೇತರ ಸಂಸ್ಥೆಗಳು (ಗೃಹ ಸಾಲ ಸಂಸ್ಥೆಗಳನ್ನು ಹೊರತುಪಡಿಸಿ) ಯಾವುವೆಂದರೆ, (ಅ) ಡೆಪಾಸಿಟ್‌ಗಳನ್ನು ತೆಗೆದುಕೊಳ್ಳಲು ಮಾನ್ಯತೆ ಪಡೆದಿರುವಂಥ; (ಬ) ಗ್ರಾಹಕರ ಇಂಟರ್‌ಫೇಸ್ ಇರುವಂಥ, 100 ಕೋಟಿ ರೂ ಮೀರಿದ ಆಸ್ತಿ ಮೌಲ್ಯ ಇರುವಂಥವು.

3. ದೂರುಗಳನ್ನು https://cms.rbi.org.in ಲಿಂಕ್‌ಗೆ ಭೇಟಿ ಕೊಟ್ಟು ಸಲ್ಲಿಸಬಹುದಾಗಿದೆ. ಜೊತೆಗೆ ಇದಕ್ಕೆಂದೇ ಇರುವ ಇ-ಮೇಲ್ ವಿಳಾಸಕ್ಕೂ ಸಹ ದೂರುಗಳನ್ನು ಕಳುಹಿಸಬಹುದು. ದೈಹಿಕ ರೂಪದಲ್ಲಿ ಲಿಖಿತ ದೂರುಗಳನ್ನು ರಿಸರ್ವ್‌ ಬ್ಯಾಂಕ್‌ನ ಕೇಂದ್ರೀಕೃತ ರೆಸಿಟ್ ಮತ್ತು ಪರಿಷ್ಕರಣಾ ಕೇಂದ್ರದ ವಿಳಾಸವಾದ — ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 4ನೇ ಮಹಡಿ, ಸೆಕ್ಟರ್‌ 17, ಚಂಡೀಘಡ – 160017ಗೆ ಕಳುಹಿಸಬಹುದು.

ಆನ್ಲೈನ್ ಮೂಲಕ ಬ್ಯಾಂಕುಗಳು ಹಾಗೂ ಎನ್‌ಬಿಎಫ್‌ಸಿಗಳ ಮೇಲೆ ದೂರು ನೀಡಲು ಈ ಸೂಚನೆಗಳನ್ನು ಪಾಲಿಸಿ

1. https://cms.rbi.org.inಗೆ ಲಾಗಿನ್ ಆಗಿ.

2. ‘File A Complaint’ ಮೇಲೆ ಕ್ಲಿಕ್ ಮಾಡಿ.

3. ಕ್ಯಾಪ್ಚಾ ಖಾತ್ರಿಪಡಿಸಿ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಹೆಸರನ್ನು ಬರೆಯಿರಿ.

4. ವೈಯಕ್ತಿಕ ವಿವರಗಳನ್ನು ಸಲ್ಲಿಸಿ.

5. ನೀವು ದೂರು ನೀಡಲು ಬಯಸುವ ಸಂಸ್ಥೆಯ ವಿಧವನ್ನು ಆಯ್ಕೆ ಮಾಡಿ.

6. ಸಂಬಂಧಪಟ್ಟ ನಿಯಂತ್ರಣ ಸಂಸ್ಥೆಗೆ ನೀವು ಕೊಟ್ಟ ದೂರಿನ ವಿವರಗಳನ್ನು ಒದಗಿಸಿ.

7. ಆ ದೂರಿನ ಪ್ರತಿಯನ್ನು ಲಗತ್ತಿಸಿ.

8. ಕಾರ್ಡ್ ಸಂಖ್ಯೆ, ಸಾಲ ಅಥವಾ ಠೇವಣಿ ಖಾತೆಯ ವಿವರಗಳನ್ನು ದೂರು ಸಲ್ಲಿಸಲು ಒದಗಿಸಿ.

9. ಡ್ರಾಪ್‌ ಡೌನ್‌ ಮೆನುವಿನಲ್ಲಿ ದೂರಿನ ಕೆಟಗರಿ ಆಯ್ಕೆ ಮಾಡಿ.

10. ನಿಮ್ಮ ದೂರಿನ ಉಪಕೆಟಗರಿ ಆಯ್ಕೆ ಮಾಡಿ.

11. ವಾಸ್ತವಿಕ ವಿವರಗಳು, ವಿವಾದಿತ ಮೊತ್ತ, ಪರಿಹಾರದ ವಿವರಗಳನ್ನು ಒದಗಿಸಿ.

12. ಈಗ ಪರಿಶೀಲನೆ ಮಾಡಿ ನಿಮ್ಮ ದೂರನ್ನು ಸಲ್ಲಿಸಿ.

ಇದಕ್ಕಾಗಿ ನೀವು ಆರ್‌.ಬಿ.ಐ.ನ ವಿಡಿಯೋ ಟ್ಯುಟೋರಿಯಲ್ ವೀಕ್ಷಿಸಬಹುದಾಗಿದೆ. ಅದರಲ್ಲಿ ಪ್ರತಿಯೊಂದು ಕ್ರಮದ ಬಗ್ಗೆಯೂ ವಿವರವಾಗಿ ತಿಳಿಸಲಾಗಿದೆ. ಅದಕ್ಕಾಗಿ https://www.youtube.com/watch?v=5uigBFwPUp8 ಲಿಂಕ್‌ಗೆ ಭೇಟಿ ನೀಡಿ.

ಜೊತೆಗೆ ಸಂಪರ್ಕ ಕೇಂದ್ರವೊಂದನ್ನು ತೆರೆದು ಅದಕ್ಕೆ ಟೋಲ್‌ ರಹಿತ ಸಂಖ್ಯೆ 14448 ಅನ್ನು ಸಕ್ರಿಯಗೊಳಿಸಲಾಗಿದೆ. ಈ ಮೂಲಕ ಹಿಂದಿ, ಇಂಗ್ಲಿಷ್ ಹಾಗೂ ಎಂಟು ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಮೇಲ್ಕಂಡ ವಿಷಯದ ಬಗ್ಗೆ ವಿವರಗಳನ್ನು ಪಡೆಯಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...