2023-24ರ ವಿತ್ತೀಯ ವರ್ಷದ ಮೊದಲ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಳೆ ದೇಶೀ ಹಾಗೂ ಜಾಗತಿಕ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಿದೆ.
ಚಿಲ್ಲರೆ ಹಣದುಬ್ಬರ ಹಾಗೂ ಜಾಗತಿಕ ಆರ್ಥಿಕ ಮುಗ್ಗಟ್ಟಿನ ವಿಚಾರದಲ್ಲಿ ಮುಂಚೂಣಿ ಕೇಂದ್ರ ಬ್ಯಾಂಕುಗಳಾದ ಅಮೆರಿಕನ್ ಫೆಡರಲ್ ರಿಸರ್ವ್, ಐರೋಪ್ಯ ಕೇಂದ್ರ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತಾಗಿಯೂ ಈ ವೇಳೆ ಚರ್ಚಿಸಲಾಗುವುದು.
ಜಾಗತಿಕ ಪೂರೈಕೆ ಕೊಂಡಿಯಲ್ಲಿ ವ್ಯತ್ಯಾಸಗಳ ಬಳಿಕ ರಷ್ಯಾ-ಉಕ್ರೇನ್ ಕದನದ ಕಾರಣದಿಂದ ಆಗುತ್ತಿರುವ ಅನೇಕ ಮಾರ್ಪಾಡುಗಳ ನಡುವೆಯೇ ಕಳೆದ ಮೇ ತಿಂಗಳಿನಿಂದಲೂ ಆರ್‌ಬಿಐ ಬಡ್ಡಿ ದರಗಳಲ್ಲಿ ಏರಿಕೆ ಮಾಡುತ್ತಲೇ ಬಂದಿದೆ.
ಫೆಬ್ರವರಿಯಲ್ಲಿ ಕಳೆದ ಬಾರಿ ಹಮ್ಮಿಕೊಂಡಿದ್ದ ದ್ವೈ-ಮಾಸಿಕ ಹಣಕಾಸು ನೀತಿ ಸಭೆಯ ವೇಲೆ ರೆಪೋ ದರದಲ್ಲಿ 25 ಮೂಲಾಂಶಗಳನ್ನು ಏರಿಸಿ, 6.5%ಗೆ ಹೆಚ್ಚಿಸಿತ್ತು.