ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ನಿಯಂತ್ರಿತ ಘಟಕಗಳ ವಿರುದ್ಧದ ದೂರುಗಳ ಪರಿಹಾರಕ್ಕಾಗಿ ಏಕೀಕೃತ ಲೋಕಪಾಲ ಯೋಜನೆ ಜಾರಿಗೆ ತಂದಿದ್ದು, ಗ್ರಾಹಕರು ತಮ್ಮ ದೂರುಗಳಿಗೆ, ಸಂಬಂಧಿಸಿದವರಿಂದ 30 ದಿನಗಳ ಒಳಗಾಗಿ ಪರಿಹಾರ ಸಿಗದಿದ್ದರೆ ಲೋಕಪಾಲ/ಆರ್‌ಬಿಐ ಒಂಬುಡ್ಸ್ ಮನ್ ಗೆ ದೂರು ಸಲ್ಲಿಸಬಹುದಾಗಿದ್ದು, ಈ ಕುರಿತಂತೆ ಉಪಯುಕ್ತ ಮಾಹಿತಿ ಇಲ್ಲಿದೆ.
ರಿಸರ್ವ್ ಬ್ಯಾಂಕ್ ಮುಖೇನ ನಿಯಮಿತ ಬ್ಯಾಂಕ್/ ಎನ್ ಬಿ ಎಫ್ ಸಿ / ಕ್ರೆಡಿಟ್ ಇನ್ಫಾರ್ಮೆಶನ್ ಕಂಪನೀಸ್ / ಸಿಸ್ಟಮ್ ಪಾರ್ಟಿಸಿಪೇಂಟ್ ಮುಖೇನ ತೃಪ್ತಿದಾಯಕ ಪರಿಹಾರ ಸಿಗದಿದ್ದರೆ ದೂರುಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಪಟ್ಟಿಯಲ್ಲಿ ಇಲ್ಲದ ದೂರುಗಳನ್ನು ಹೊರತುಪಡಿಸಿ ಸೇವಾ ನ್ಯೂನ್ಯತೆಗೆ ಸಂಬಂಧಿಸಿದ ದೂರುಗಳಿಗೂ ಇದು ಅನ್ವಯವಾಗುತ್ತದೆ.
ಗ್ರಾಹಕರು ಆನ್ಲೈನ್ ನಲ್ಲಿ https://cms.rbi.gov.in ವೆಬ್ಸೈಟ್ ಮೂಲಕ ಅಥವಾ ಅಂಚೆ ಮೂಲಕ ಕೇಂದ್ರೀಕೃತ ರಶೀದಿ ಮತ್ತು ಸಂಸ್ಕರಣಾ ಕೇಂದ್ರ, ಭಾರತೀಯ ರಿಸರ್ವ್ ಬ್ಯಾಂಕ್, ಚಂಡೀಗಢ -160017 ಇಲ್ಲಿ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದ್ದು, ಇದರ ಸ್ಥಿತಿಯನ್ನು https://cms.rbi.gov.in ವೆಬ್ಸೈಟ್ ನಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ 14448 ವಾರದ ದಿನಗಳಂದು (ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ) ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಇಂಗ್ಲೀಷ್ ಮತ್ತು ಹಿಂದಿಯಲ್ಲಿ, ಬೆಳಗ್ಗೆ 9:30 ರಿಂದ ಸಂಜೆ 5:15 ರ ತನಕ ಕನ್ನಡವೂ ಸೇರಿದಂತೆ 10 ಪ್ರಾದೇಶಿಕ ಭಾಷೆಗಳಲ್ಲಿ (ಕನ್ನಡ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ, ಗುಜರಾತಿ, ಒಡಿಯಾ, ಮರಾಠಿ, ಅಸ್ಸಾಮಿ, ಬೆಂಗಾಲಿ) ಸಂಪರ್ಕಿಸಬಹುದಾಗಿದೆ.