ನಿಯಮಗಳ ಪಾಲನೆ ಮಾಡದೇ ಇರುವ ಆಪಾದನೆ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮೇಲೆ ರಿಸರ್ವ್ ಬ್ಯಾಂಕ್ ಒಂದು ಕೋಟಿ ರೂ. ದಂಡ ವಿಧಿಸಿದೆ. ನವೆಂಬರ್ 16, 2021ರಲ್ಲಿ ಹೊರಡಿಸಲಾದ ಆದೇಶವೊಂದರ ಮೂಲಕ ಈ ದಂಡವನ್ನು ಆರ್ಬಿಐ ವಿಧಿಸಿದೆ.
ಕೇಂದ್ರ ಬ್ಯಾಂಕ್ ಹೇಳುವಂತೆ ಎಸ್ಬಿಐ ಮೇಲೆ ಉಸ್ತುವಾರಿ ಮೌಲ್ಯಮಾಪನಕ್ಕಾಗಿ ಶಾಸನಾತ್ಮಕ ಪರೀಕ್ಷೆಗಳನ್ನು (ಐಎಸ್ಇ) ಕೈಗೊಂಡ ಆರ್ಬಿಐ, ಮಾರ್ಚ್ 31, 2018 ಹಾಗೂ ಮಾರ್ಚ್ 31, 2019ರಲ್ಲಿ ಎಸ್ಬಿಐನ ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಮುಂದಾಗಿದೆ.
ʼಸಂವಿಧಾನʼದ ಆಶಯಗಳನ್ನು ಬಿಂಬಿಸಿದೆ ಈ ವೆಡ್ಡಿಂಗ್ ಕಾರ್ಡ್
ರಿಸ್ಕ್ ನಿರ್ವಹಣೆ ವರದಿಗಳು, ಪರೀಕ್ಷಾ ವರದಿ ಹಾಗೂ ಸಂಬಂಧಪಟ್ಟ ಎಲ್ಲಾ ಪರೀಕ್ಷೆಗಳ ಮೂಲಕ ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಕಾನೂನೊಂದರ ಉಲ್ಲಂಘನೆ ಮಾಡುವ ಮೂಲಕ, “ಸಾಲಗಾರ ಕಂಪನಿಗಳ ಶೇರುಗಳನ್ನು ಅಡಮಾನವಾಗಿ ಹಿಡಿದಿಟ್ಟುಕೊಂಡಿದ್ದ ಬ್ಯಾಂಕ್, ಈ ಕಂಪನಿಗಳ ಪಾವತಿಸಲ್ಪಟ್ಟ ಷೇರು ಬಂಡವಾಳದ 30% ಮೀರಿ ಹಿಡಿತಕ್ಕೆ ಪಡೆದಿತ್ತು,” ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಎಸ್ಬಿಐಗೆ ಶೋಕಾಸ್ ನೊಟೀಸ್ ನೀಡಲಾಗಿದೆ. ಗ್ರಾಹಕರು ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ನೋಟಿಸ್ಗೆ ಎಸ್ಬಿಐ ಕೊಟ್ಟ ಪ್ರತಿಕ್ರಿಯೆಯನ್ನು ಪರಿಗಣಿಸಿದ ಆರ್ಬಿಐ, ಮೇಲ್ಕಂಡ ಕಾಯಿದೆಯ ಕಾನೂನೊಂದರ ಉಲ್ಲಂಘನೆಯಾಗಿರುವುದು ದೃಢೀಕರಿಸಲ್ಪಟ್ಟಿದೆ ಎಂದು ಹಣದ ರೂಪದಲ್ಲಿ ದಂಡ ವಿಧಿಸಿದೆ.