alex Certify ಸಾಲ ಪಡೆದವರಿಗೆ ಕಾದಿದೆಯಾ ಮತ್ತೊಂದು ಶಾಕ್….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಪಡೆದವರಿಗೆ ಕಾದಿದೆಯಾ ಮತ್ತೊಂದು ಶಾಕ್….?

ದೇಶದಲ್ಲಿ ಏಪ್ರಿಲ್‌ನಲ್ಲಿ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಮಟ್ಟವಾದ 7.79 ಪರ್ಸೆಂಟ್‌ಗೆ ಏರಿಕೆ ಕಂಡಿರುವುದರಿಂದ RBI ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

2023 ನೇ ಹಣಕಾಸು ವರ್ಷದಲ್ಲಿ ರಿಸರ್ವ್ ಬ್ಯಾಂಕ್ ಶೇಕಡಾ 1 ರಷ್ಟು ರೆಪೊ ದರ ಏರಿಕೆ ಮಾಡುವ ಲಕ್ಷಣಗಳಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸೆಲ್ ಅಭಿಪ್ರಾಯಪಟ್ಟಿದೆ‌.

2023 ನೇ ಆರ್ಥಿಕ ವರ್ಷದಲ್ಲಿ ಸರಾಸರಿ ಗ್ರಾಹಕ ಬೆಲೆ ಹಣದುಬ್ಬರವು 2022ರಲ್ಲಿ ದಾಖಲಾದ 5.5 ಪ್ರತಿಶತಕ್ಕಿಂತ ಬಹಳ ಹೆಚ್ಚಾಗಿದೆ. RBI ನಿರೀಕ್ಷೆ ಮಾಡಿದ್ದ 6 ಪ್ರತಿಶತಕ್ಕಿಂತಲೂ ಹೆಚ್ಚಾಗಿ 6.3 ಶೇಕಡಾಕ್ಕೆ ಬರಲಿದೆ ಎಂದು ಈಗ ನಿರೀಕ್ಷಿಸುತ್ತದೆ ಎಂದು ಕ್ರಿಸೆಲ್ ಸಂಶೋಧನಾ ವಿಭಾಗ ಹೇಳಿದೆ.

ಬದಲಾಗಲಿದೆಯಾ ಗೃಹ ಸಚಿವರ ಖಾತೆ……? ಸ್ಪಷ್ಟನೆ ನೀಡಿದ ಅರಗ ಜ್ಞಾನೇಂದ್ರ

ಈ ಹಣಕಾಸು ವರ್ಷದಲ್ಲಿ ಹಣದುಬ್ಬರವು ಗರಿಷ್ಠ ಏರಿಕೆಯಾಗಿದೆ. ಆಹಾರ, ಇಂಧನ ಮತ್ತು ಪ್ರಮುಖ ಕ್ಷೇತ್ರಗಳಲ್ಲಿ ಏರಿಕೆಯಾಗುತ್ತಿದೆ. ಈ ಆರ್ಥಿಕ ವರ್ಷದ ಉಳಿದ ಅವಧಿಯಲ್ಲಿ RBI ರೆಪೋ ದರಗಳನ್ನು ಶೇಕಡಾ 0.75ರಿಂದ ಶೇಕಡಾ 1ರಷ್ಟು ಹೆಚ್ಚಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕ್ರಿಸೆಲ್ ಹೇಳಿದೆ.

ಆಹಾರ ಅಥವಾ ಇಂಧನ ಹಣದುಬ್ಬರವನ್ನು ತಗ್ಗಿಸುವಲ್ಲಿ ಈ ಹಿಂದೆ ಮಾಡಿದ ದರ ಹೆಚ್ಚಳವು ಪರಿಣಾಮಕಾರಿಯಾಗಿಲ್ಲ ಎಂದು ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಆದರೆ ಎರಡನೇ ಸುತ್ತಿನ ಪರಿಣಾಮಗಳನ್ನು ನಿಗ್ರಹಿಸುವಲ್ಲಿ ಸಹಾಯ ಮಾಡಬಹುದು ಎಂದು ಊಹಿಸಲಾಗಿದೆ.

ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಇನ್ನಷ್ಟು ಶ್ರಮ ಹಾಕಬೇಕಾಗಹುದು. ತೆರಿಗೆಗಳನ್ನು ಕಡಿಮೆ ಮಾಡುವುದು ಸಬ್ಸಿಡಿಗಳಿಂದ ಹೆಚ್ಚುವರಿ ಹಣಕಾಸಿನ ಒತ್ತಡಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...