alex Certify ಗುಜರಾತ್ ಚುನಾವಣೆ; ಪತ್ನಿಯ ಹೊಸ ಟ್ವಿಟರ್ ಖಾತೆ ಲಿಂಕ್ ಹಂಚಿಕೊಂಡ ರವೀಂದ್ರ ಜಡೇಜಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್ ಚುನಾವಣೆ; ಪತ್ನಿಯ ಹೊಸ ಟ್ವಿಟರ್ ಖಾತೆ ಲಿಂಕ್ ಹಂಚಿಕೊಂಡ ರವೀಂದ್ರ ಜಡೇಜಾ

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಹೊಸ ಟ್ವಿಟರ್ ಅಕೌಂಟ್ ಓಪನ್ ಮಾಡಿದ್ದಾರೆ. ಈ ಬಗ್ಗೆ ರವೀಂದ್ರ ಜಡೇಜಾ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಪತ್ನಿ ರಿವಾಬಾ ಜಡೇಜಾ ಅವರು ಟ್ವಿಟರ್‌ಗೆ ಸೇರ್ಪಡೆಗೊಂಡಿದ್ದಾರೆ ಎಂದು ಕ್ರಿಕೆಟಿಗ ರವೀಂದ್ರ ಜಡೇಜಾ ಬುಧವಾರ ಘೋಷಿಸಿದ್ದಾರೆ. ಅಧಿಕೃತ ಖಾತೆ @Rivaba4BJP ಎಂದು ರವೀಂದ್ರ ಜಡೇಜಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

ಜಾಮ್‌ನಗರ (ಉತ್ತರ) ಸ್ಥಾನಕ್ಕೆ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ರಿವಾಬಾ ಜಡೇಜಾ ಅವರನ್ನು ಕಣಕ್ಕಿಳಿಸಿದೆ.

ಜನರಿಗಾಗಿ ಕೆಲಸ ಮಾಡಲು ತಮ್ಮ ಪತ್ನಿ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ ಎಂದು ಭಾರತೀಯ ಆಲ್‌ರೌಂಡರ್ ಜಡೇಜಾ ಸೋಮವಾರ ಹೇಳಿದ್ದರು.

ಹಾಲಿ ಶಾಸಕ ಧರ್ಮೇಂದ್ರ ಸಿಂಗ್ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಿದ ನಂತರ ರಿವಾಬಾ ಜಡೇಜಾ ಜಾಮ್‌ನಗರ (ಉತ್ತರ) ಸ್ಥಾನಕ್ಕೆ ಬಿಜೆಪಿಯ ಅಭ್ಯರ್ಥಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...