alex Certify ನಟಿ ರವೀನಾ ಟಂಡನ್ ಮಾಧ್ಯಮಗಳ ಮುಂದಿಟ್ಟಿದ್ದಾರೆ ಈ ಪ್ರಮುಖ ಪ್ರಶ್ನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರವೀನಾ ಟಂಡನ್ ಮಾಧ್ಯಮಗಳ ಮುಂದಿಟ್ಟಿದ್ದಾರೆ ಈ ಪ್ರಮುಖ ಪ್ರಶ್ನೆ….!

ಮಾಧುರಿ ದೀಕ್ಷಿತ್ ಅವರನ್ನು 90 ರ ದಶಕದ ಸೂಪರ್ ಸ್ಟಾರ್ ಎಂದು ಹೇಳುತ್ತೀರಿ. ಆದರೆ ಇದನ್ನು ಸಲ್ಮಾನ್ ಖಾನ್ ಗಾಗಲೀ, ಸಂಜಯ್ ದತ್ ಅವರಿಗಾಗಲೀ ಏಕೆ ಹೇಳುವುದಿಲ್ಲ ಎಂದು ನಟಿ ರವೀನಾ ಟಂಡನ್ ಪ್ರಶ್ನಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆ 2022 ರಲ್ಲಿ ಪಂಕಜ್ ತ್ರಿಪಾಠಿ ಅವರೊಂದಿಗಿನ ಅಧಿವೇಶನದಲ್ಲಿ, ರವೀನಾ ಟಂಡನ್ ಅವರು ನಟಿಯರನ್ನು ಮಾಧ್ಯಮಗಳು ಹೇಗೆ ನಡೆಸಿಕೊಳ್ಳುತ್ತವೆ ಎಂಬುದರ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ನಟರು ಶಾಶ್ವತವಾಗಿ ಸೂಪರ್ಸ್ಟಾರ್ಡಮ್ ಅನ್ನು ಆನಂದಿಸುತ್ತಾರೆ ಎಂದ ಅವರು ಬಾಲಿವುಡ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಪಡೆಯುವ ವಿಭಿನ್ನ ಟ್ರೀಟ್ಮೆಂಟ್ ಗಳ ಬಗ್ಗೆ ಮಾತನಾಡಿದರು.

ನಟ ಮತ್ತು ನಟಿಯರ ನಡುವೆ ಏಕೆ ವ್ಯತ್ಯಾಸ ಮಾಡುತ್ತಾರೆ ಎಂದು ನಾನು ಮಾಧ್ಯಮಗಳನ್ನು ಕೇಳುತ್ತಿದ್ದೆ. ಅಮೀರ್ 2-3 ವರ್ಷಗಳ ಕಾಲ ಬಿಡುವು ಮಾಡಿಕೊಂಡು ಸಿನಿಮಾದೊಂದಿಗೆ ಕಮ್ ಬ್ಯಾಕ್ ಮಾಡಿದಾಗ ಅದನ್ನು ಅವರ ಕಮ್ ಬ್ಯಾಕ್ ಎನ್ನಲ್ಲ.

90ರ ದಶಕದ ಸೂಪರ್‌ಸ್ಟಾರ್ ಅಮೀರ್ ಖಾನ್ ಇಂದು ನಮ್ಮೊಂದಿಗಿದ್ದಾರೆ ಎಂದು ನೀವು ಹೇಳುವುದಿಲ್ಲ. ಹಮ್ ಭೀ ಲಗತರ್ ಕಾಮ್ ಹೈ ಕರ್ತೇ ಆರೇ ಹೈ (ನಾವು ಸಹ ನಿಯಮಿತವಾಗಿ ಕೆಲಸ ಮಾಡುತ್ತಿದ್ದೇವೆ). ಆದರೆ ‘90ರ ದಶಕದ ಸೂಪರ್‌ಸ್ಟಾರ್’ ಮಾಧುರಿ ದೀಕ್ಷಿತ್ ಈಗ ಇದನ್ನು ಮಾಡುತ್ತಿದ್ದಾರೆ’ ಎಂದು ಮಾಧ್ಯಮಗಳಲ್ಲಿ ಹಲವು ಲೇಖನಗಳನ್ನು ನಾನು ನೋಡುತ್ತೇನೆ.

ಅವರೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ, ಆದರೆ ನೀವು ಅವರನ್ನು ಹೇಗೆ ಆ ರೀತಿ ಲೇಬಲ್ ಮಾಡಿದಿರಿ? ನೀವು ಸಲ್ಮಾನ್ ಖಾನ್ ಅಥವಾ ಸಂಜಯ್ ದತ್ ಬಗ್ಗೆ ಈ ರೀತಿ ಹೇಳಲ್ಲ. ಆದ್ದರಿಂದ ನಾವು ಈ ಅಸಮಾನತೆಯನ್ನು ಕೊನೆಗೊಳಿಸಬೇಕಾಗಿದೆ ಎಂದರು.

ವೀಡಿಯೊ ಕರೆ ಮೂಲಕ ಹಿಂದೂಸ್ತಾನ್ ಟೈಮ್ಸ್ ಲೀಡರ್‌ಶಿಪ್ ಶೃಂಗಸಭೆ 2022 ಭಾಗವಹಿಸಿದ ರವೀನಾ ಟಂಡನ್ ಚಿತ್ರರಂಗದಲ್ಲಿ ನಟ ಮತ್ತು ನಟಿಯನ್ನು ಭಿನ್ನವಾಗಿ ನೋಡುವುದರ ಬಗ್ಗೆ ದನಿಯೆತ್ತಿದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...