alex Certify ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ, ನವಜಾತ ಶಿಶು ಪಾದ ತಿಂದ ಇಲಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ, ನವಜಾತ ಶಿಶು ಪಾದ ತಿಂದ ಇಲಿಗಳು…!

ಇಂದೋರ್ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಪಾದಗಳನ್ನು ಇಲಿಗಳು ತಿಂದಿವೆ. ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ಇಂದೋರ್ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯ ನರ್ಸರಿ ಆರೈಕೆ ಘಟಕದಲ್ಲಿ ಘಟನೆ ನಡೆದಿದೆ.

ಸೋಮವಾರ ಆಸ್ಪತ್ರೆಯ ನವಜಾತ ಶಿಶು ಆರೈಕೆ ಘಟಕದಲ್ಲಿ ಶಿಶುವಿನ ಕಾಲುಗಳನ್ನು ಇಲಿಗಳು ತಿಂದಿದ್ದು ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಯ ಅಧೀಕ್ಷಕ ಡಾ. ಪ್ರಮೇಂದ್ರ ಠಾಕೂರ್ ಈ ಬಗ್ಗೆ ಮಾಹಿತಿ ನೀಡಿದ್ದು, ಇಲಿಗಳು ನವಜಾತ ಶಿಶುವಿನ ಕಾಲು ತಿಂದಿರುವುದು ಗಮನಕ್ಕೆ ಬಂದಿದೆ. ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆ ಗಮನಕ್ಕೆ ಬರುತ್ತಲೇ ಇಬ್ಬರು ವೈದ್ಯರು ಮತ್ತು ಆಡಳಿತ ಅಧಿಕಾರಿ ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ತನಿಖೆಗೆ ರಚಿಸಿರುವುದಾಗಿ ಠಾಕೂರ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...