ಮಹಾಬೂಬಾದ್: ಕೃಷಿಕನೊಬ್ಬ ತನ್ನ ಹೊಟ್ಟೆಯ ಶಸ್ತ್ರಚಿಕಿತ್ಸೆಗೆಂದು ತೆಗೆದಿಟ್ಟಿದ್ದ 2 ಲಕ್ಷ ರೂ.ಗಳನ್ನು ಇಲಿಗಳು ಹಾಳುಗೆಡವಿರೋ ಘಟನೆ ತೆಲಂಗಾಣದ ಮಹಬೂಬಬಾದ್ ನ ವೇಮುನೂರ್ ನಲ್ಲಿ ನಡೆದಿದೆ.
ವೇಮುನೂರ್ ಗ್ರಾಮದ ರೈತ ರೆಡ್ಯಾ ನಾಯಕ್ ಎಂಬಾತ ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದ. ಆದರೆ ಈತನಿಗೆ ಆರೋಗ್ಯದ ಸಮಸ್ಯೆ ಎದುರಾದ ಕಾರಣ ಶಸ್ತ್ರಚಿಕಿತ್ಸೆಗೆ 4 ಲಕ್ಷ ರೂ.ಗಳು ಬೇಕಾಗಿದ್ದವು. ಆದರೆ ಕಷ್ಟಪಟ್ಟು 2 ಲಕ್ಷ ರೂ.ಗಳನ್ನು ಹೊಂದಿಸಿದ್ದ. ಈ ಹಣವನ್ನು ಒಂದು ಬಟ್ಟೆ ಚೀಲದಲ್ಲಿ ಇಟ್ಟುಕೊಂಡಿದ್ದ. ದುರಾದೃಷ್ಟವಶಾತ್ ಇಲಿಗಳು ಹಣವನ್ನು ಹರಿದುಹಾಕಿದೆ.
ಶ್ರೀಲಂಕಾ ವಿರುದ್ಧದ ಸರಣಿಗೆ ಗೈರಾದರೂ ಮೈದಾನದಲ್ಲಿ ಕಾಣಿಸಿಕೊಂಡ್ರಾ ಕೊಹ್ಲಿ….?
ಇದರಿಂದ ದಿಕ್ಕುತೋಚದ ರೈತ ಹಲವಾರು ಬ್ಯಾಂಕ್ ಗಳಿಗೆ ಭೇಟಿ ನೀಡಿ ನೋಟು ಬದಲಾವಣೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಹರಿದ ಈ ನೋಟುಗಳನ್ನು ಬ್ಯಾಂಕ್ ಸಿಬ್ಬಂದಿ ತೆಗೆದುಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿ ಕಳುಹಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕನ್ನು ಸಂಪರ್ಕಿಸಲು ಸಿಬ್ಬಂದಿ ಸಲಹೆ ನೀಡಿದ್ದಾರೆ. ಮಣ್ಣಾದ ಹಾಗೂ ಹಾನಿಗೊಳಗಾದ ನೋಟು ವಿನಿಮಯ ಮಾಡಿಕೊಳ್ಳಲೂ ಆರ್ಬಿಐ ಸೂಚನೆಯಿದೆ. ಆದರೆ, ಇಲಿಗಳಿಂದ ಹಾನಿಗೊಳಗಾದ ನೋಟುಗಳ ಬಗ್ಗೆ ಆರ್ಬಿಐ ಉಲ್ಲೇಖಿಸಿಲ್ಲ ಎಂದು ಹೇಳಲಾಗಿದೆ.
ಇನ್ನು ಈ ವಿಷಯ ತಿಳಿದ ತೆಲಂಗಾಣ ಬುಡಕಟ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸತ್ಯವತಿ ರಾಥೋಡ್ ಅವರು ರೈತನಿಗೆ ನೆರವು ನೀಡುವ ಭರವಸೆ ನೀಡಿದ್ದಾರೆ.