ರೇಷನ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಸುದ್ದಿಯೊಂದಿದೆ. ರಾಜ್ಯ ಸರ್ಕಾರಗಳು ಪಡಿತರ ಚೀಟಿ ನಿಯಮಗಳಲ್ಲಿ ಬದಲಾವಣೆ ಮಾಡ್ತಿರುತ್ತದೆ. ರೇಷನ್ ಕಾರ್ಡ್ ನಲ್ಲಿ ಅಥವಾ ನಿಯಮ ಪಾಲನೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತವರ ರೇಷನ್ ಕಾರ್ಡ್ ರದ್ದಾಗಲಿದೆ. ಅನೇಕ ದಿನಗಳಿಂದ ನೀವು ರೇಷನ್ ಕಾರ್ಡ್ ಮೂಲಕ ಪರಿತರ ಪಡೆದಿಲ್ಲವೆಂದ್ರೆ ನಿಮ್ಮ ಕಾರ್ಡ್ ರದ್ದಾಗಲಿದೆ.
ಬೆಚ್ಚಿ ಬೀಳಿಸುವಂತಿದೆ ವಿದ್ಯಾರ್ಥಿಗೆ ನಿರ್ದಯವಾಗಿ ಥಳಿಸಿದ ಶಿಕ್ಷಕನ ವಿಡಿಯೋ
ಎಷ್ಟು ತಿಂಗಳಿಂದ ನೀವು ಪಡಿತರ ಪಡೆದಿಲ್ಲ ಎಂಬ ಮಾಹಿತಿ ಪಡಿತರ ಇಲಾಖೆಯಲ್ಲಿ ಇರಲಿದೆ. ದೀರ್ಘಕಾಲ ಅಂದ್ರೆ 6 ತಿಂಗಳವರೆಗೆ ನೀವು ಪಡಿತರ ಪಡೆಯದೆ ಹೋದಲ್ಲಿ ನಿಮ್ಮ ಪಡಿತರ ಚೀಟಿ ರದ್ದಾಗಲಿದೆ. ನಿಮಗೆ ಸರ್ಕಾರ ನೀಡುವ ಅಗ್ಗದ ದರದ ಪಡಿತರ ಅಗತ್ಯವಿಲ್ಲ ಅಥವಾ ನೀವು ಪಡಿತರ ಚೀಟಿ ಪಡೆಯಲು ಯೋಗ್ಯರಲ್ಲ ಎಂಬ ಕಾರಣ ಹೇಳಿ ಚೀಟಿ ರದ್ದು ಮಾಡಲಾಗುತ್ತದೆ.
ಅಗಸೆ ಬೀಜದಲ್ಲಿದೆ ʼಸೌಂದರ್ಯʼದ ಗುಟ್ಟು
ರದ್ದಾದ ಪಡಿತರ ಚೀಟಿಯನ್ನು ನೀವು ಮತ್ತೆ ಪಡೆಯಬಹುದು. ಆದ್ರೆ ಅದಕ್ಕೆ ಮತ್ತೊಂದಿಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ. ಮೊದಲು ರಾಜ್ಯ ಅಥವಾ ಕೇಂದ್ರದ AePDS ಪೋರ್ಟಲ್‌ಗೆ ಹೋಗಬೇಕು. ಪಡಿತರ ಚೀಟಿ ತಿದ್ದುಪಡಿ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಪಡಿತರ ಚೀಟಿ ತಿದ್ದುಪಡಿ ಪುಟಕ್ಕೆ ಹೋಗಿ, ಪಡಿತರ ಸಂಖ್ಯೆಗಾಗಿ ಫಾರ್ಮ್ ಭರ್ತಿ ಮಾಡಬೇಕು. ಪಡಿತರ ಚೀಟಿ ಮಾಹಿತಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಅದನ್ನು ಸರಿಪಡಿಸಬೇಕು. ತಿದ್ದುಪಡಿಯನ್ನು ಮಾಡಿದ ನಂತರ, ಸ್ಥಳೀಯ ಪಿಡಿಎಸ್ ಕಚೇರಿಗೆ ಭೇಟಿ ನೀಡಿ, ಪರಿಶೀಲನಾ ಅರ್ಜಿ ಸಲ್ಲಿಸಬೇಕು. ಪಡಿತರ ಚೀಟಿ ಸಕ್ರಿಯಗೊಳಿಸುವ ಅರ್ಜಿಯನ್ನು ಸ್ವೀಕರಿಸಿದರೆ, ರದ್ದಾದ ಪಡಿತರ ಚೀಟಿ ಮತ್ತೆ ಸಕ್ರಿಯಗೊಳ್ಳುತ್ತದೆ.