
ಬೆಳಗಾವಿ: ಪಟಾಕಿ ಕಿಡಿ ಬಿದ್ದು ರಥಕ್ಕೆ ಬೆಂಕಿ ತಗುಲಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಟೆಯಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ರಥದ ಮೇಲ್ಭಾಗ ಹೊತ್ತಿ ಉರಿದಿದೆ.
ಜಡಿ ಶಂಕರಲಿಂಗ ದೇವರ 38 ನೇ ರಥೋತ್ಸವದಲ್ಲಿ ಘಟನೆ ನಡೆದಿದ್ದು, ಶಿವಪೇಟೆ ಗ್ರಾಮಸ್ಥರು ಕೂಡಲೇ ಬೆಂಕಿಯನ್ನು ನಂದಿಸಿದ್ದಾರೆ. ರಥೋತ್ಸವದ ಅಂಗವಾಗಿ ಪಟಾಕಿ ಸಿಡಿಸುವ ವೇಳೆ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡು ರಥದ ಮೇಲ್ಭಾಗ ಹೊತ್ತಿ ಉರಿದಿದೆ. ಗ್ರಾಮಸ್ಥರು ಕೂಡಲೇ ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಹಾನಿಯಾಗಿಲ್ಲವೆನ್ನಲಾಗಿದೆ.