alex Certify ಪಿಯಾನೋ ಕಲಿಯಲು ಮುಂದಾದ್ರು ಕೈಗಾರಿಕೋದ್ಯಮಿ ರತನ್ ಟಾಟಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಯಾನೋ ಕಲಿಯಲು ಮುಂದಾದ್ರು ಕೈಗಾರಿಕೋದ್ಯಮಿ ರತನ್ ಟಾಟಾ..!

ನಮಗೆ ಇಷ್ಟವಾಗಿರುವ ಹವ್ಯಾಸವನ್ನು ಕಲಿಯುವುದಕ್ಕಾಗಿ ಯಾವುದೇ ವಯಸ್ಸಿನ ಹಂಗು ಇರುವುದಿಲ್ಲ. ಹಾಗೆಯೇ, ಕೈಗಾರಿಕೋದ್ಯಮಿ ರತನ್ ಟಾಟಾ ಅವರಿಗೆ ಪಿಯಾನೋ ನುಡಿಸಲು ಕಲಿಯಬೇಕಂತೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.

ತಾವು ಸಂಗೀತ ವಾದ್ಯ ನುಡಿಸುವ ಚಿತ್ರವನ್ನು ಪೋಸ್ಟ್ ಮಾಡಿರುವ 83 ವರ್ಷದ ಉದ್ಯಮಿ ಟಾಟಾ. ತಾನು ಚಿಕ್ಕವನಿದ್ದಾಗ ಸ್ವಲ್ಪ ಮಟ್ಟಿಗೆ ಅದನ್ನು ಹೇಗೆ ನುಡಿಸುವುದನ್ನು ಕಲಿತೆ ಎಂಬುದಾಗಿ ವಿವರಿಸಿದ್ದಾರೆ. “ನಾನು ಇನ್ನೂ ಚೆನ್ನಾಗಿ ನುಡಿಸುವುದನ್ನು ಕಲಿಯುವ ಆಲೋಚನೆಯಿಂದ ಆಕರ್ಷಿತನಾಗಿದ್ದೇನೆ” ಎಂದು ಹೇಳಿದ್ದಾರೆ.

ತಮ್ಮ ನಿವೃತ್ತಿಯ ನಂತರ ಪಿಯಾನೋ ನುಡಿಸುವುದನ್ನು ಕಲಿಯಲು ಆರಂಭಿಸಿದೆ ಎಂದು ಹೇಳಿಕೊಂಡಿದ್ದಾರೆ. ಎರಡೂ ಕೈಗಳಿಂದ ನುಡಿಸುವುದಕ್ಕಾಗಿ ಗಮನ ನೀಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿರುವುದಲ್ಲದೇ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರಯತ್ನಿಸಲು ಮುಂದಾಗುವುದಾಗಿ ಹೇಳಿಕೊಂಡಿದ್ದಾರೆ.

ಸದ್ಯ, ಈ ಫೋಟೋಗೆ ಒಂದು ಮಿಲಿಯನ್ ಜನ ಲೈಕ್ ಕೊಟ್ಟಿದ್ದು, ನೀವೇ ನಮ್ಮ ಸ್ಪೂರ್ತಿ ಎಂದೆಲ್ಲಾ ಬಳಕೆದಾರರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...