alex Certify ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹರಾಜಾಗುತ್ತಿದೆ ಅತ್ಯಪರೂಪದ ನಸುಗೆಂಪು ವಜ್ರ; ಬೆಲೆ ಕೇಳಿದ್ರೆ ದಂಗಾಗ್ತೀರಾ…!

ಬಹಳ ಅಪರೂಪದ ರೋಸಿ-ಪರ್ಪಲ್ (ನಸುಗೆಂಪು) ಬಣ್ಣದ ವಜ್ರವೊಂದನ್ನು ಹರಾಜಿಗಿಡಲು ಸೋಥೆಬೆ ಸಜ್ಜಾಗಿದೆ. ’ಎಟರ್ನಲ್ ಪಿಂಕ್’ ಎಂದು ಕರೆಯಲಾಗುವ ಈ ವಜ್ರದ ತುಂಡು $35 ದಶಲಕ್ಷಕ್ಕೆ ನ್ಯೂಯಾರ್ಕ್‌ನ ಸೋಥೆಬೇಸ್‌ ತನ್ನ ಮ್ಯಾಗ್ನಿಫಿಸೆಂಟ್ ಜಿವೆಲ್ಸ್‌‌ ಸೇಲ್‌ನಲ್ಲಿ ಹರಾಜಿಗಿಡಲಿದೆ.

10.57 ಕ್ಯಾರೆಟ್ ಶುದ್ಧತೆಯ ಈ ಶಿಲೆಯನ್ನು ಇದುವರೆಗೂ ಕಂಡು ಬಂದ ಅತ್ಯಂತ ಹೆಚ್ಚು ಬೆಲೆಬಾಳುವ ಇಂಥದ್ದೊಂದು ವಜ್ರವೆಂದು ಮಾರ್ಕೆಟಿಂಗ್ ಮಾಡಲಾಗಿದೆ. ವಜ್ರದ ಹರಾಜು-ಪೂರ್ವ ಬೆಲೆಯೂ ಸಹ ಇದುವೆರೆಗೂ ಇಲ್ಲದಷ್ಟು ಮೊತ್ತವಾಗಿದೆ.

“ಈ ವಜ್ರದ ಕುಸುರಿ ಕಲೆ ಹಾಗೂ ಅದರ ಬಣ್ಣದ ಗಾಢತೆಗಳು ಇದನ್ನು ಜಗತ್ತಿನ ಅಸಾಧಾರಣ ವಜ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ,” ಎಂದು ಅಮೆರಿಕದ ಜೆಮಾಲಾಜಿಕಲ್ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಟಾಮ್ ಮೋಸೆಸ್ ತಿಳಿಸಿದ್ದಾರೆ. ಈ ವಜ್ರವನ್ನು ಆಫ್ರಿಕಾದ ಬೋಟ್ಸ್ವಾನಾದಲ್ಲಿ ಹೆಕ್ಕಿ ತೆಗೆಯಲಾಗಿದೆ.

ಅತ್ಯಂತ ಅಪರೂಪದ ಈ ಪಿಂಕ್ ವಜ್ರಗಳಿಗೆ ಜಗತ್ತಿನಾದ್ಯಂತ ಹೂಡಿಕೆದಾರರು ಮುಗಿಬೀಳುತ್ತಾರೆ. ಇಂಥದ್ದೇ ಪಿಂಕ್ ವಜ್ರವೊಂದನ್ನು, ಸಿಟಿಎಫ್‌ ಪಿಂಕ್ ಸ್ಟಾರ್‌, 2017ರಲ್ಲಿ ಹಾಂಕಾಂಗ್‌ನಲ್ಲಿ $71.2 ದಶಲಕ್ಷಕ್ಕೆ ಹರಾಜು ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...