ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾ (ಬಿಎಸ್‌ಐ) ದ ಸಂಶೋಧಕರು ಅಪರೂಪದ ಸಸ್ಯವನ್ನು ಮರುಶೋಧಿಸಿದ್ದಾರೆ.
ಅದನ್ನು ‘ಇಂಡಿಯನ್ ಲಿಪ್‌ಸ್ಟಿಕ್ ಸಸ್ಯ’ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರಜ್ಞ ಐಸಾಕ್ ಹೆನ್ರಿ ಬರ್ಕಿಲ್ ಸಂಗ್ರಹಿಸಿದ ಸಸ್ಯದ ಮಾದರಿಗಳ ಆಧಾರದ ಮೇಲೆ 1912 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಸ್ಟೀಫನ್ ಟ್ರಾಯ್ಟ್ ಡನ್ ಅವರು ಸಸ್ಯವನ್ನು ಮೊದಲು ಗುರುತಿಸಿದರು.
ಎಸ್ಕಿನಾಂಥಸ್ ಕುಲದ ಕೆಲವು ಜಾತಿ ಸಸ್ಯಗಳನ್ನು ಲಿಪ್‌ಸ್ಟಿಕ್ ಸಸ್ಯಗಳು ಎಂದು ಕರೆಯಲಾಗುತ್ತದೆ ಎಂದು ಬಿಎಸ್ಐ ವಿಜ್ಞಾನಿ ಕೃಷ್ಣ ಚೌಲು ಕರೆಂಟ್ ಸೈನ್ಸ್ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಿದ್ದಾರೆ.
ಮಾಜಿ ಗರ್ಲ್ ಫ್ರೆಂಡ್ ಮದುವೆಯಲ್ಲಿ ಪಾಲ್ಗೊಂಡ ಪುರುಷರ ಅನುಭವ ಹೇಗಿರುತ್ತೆ ಗೊತ್ತಾ…?
ಫ್ಲೋರಿಸ್ಟಿಕ್ ಅಧ್ಯಯನದ ಸಮಯದಲ್ಲಿ ಚೌಲು ಅವರು ಡಿಸೆಂಬರ್ 2021ರಲ್ಲಿ ಅಂಜಾವ್ ಜಿಲ್ಲೆಯ ಹ್ಯುಲಿಯಾಂಗ್ ಮತ್ತು ಚಿಪ್ರುನಿಂದ ಎಸ್ಕಿನಾಂಥಸ್‌ನ ಕೆಲವು ಮಾದರಿ ಸಂಗ್ರಹಿಸಿದ್ದರು. ಬಳಿಕ ದಾಖಲೆಗಳ ಪರಿಶೀಲನೆ ಮತ್ತು ವಿಮರ್ಶಾತ್ಮಕ ಅಧ್ಯಯನವು ಮಾದರಿಗಳು ಎಸ್ಕಿನಾಂಥಸ್ ಮಾನಿಟೇರಿಯಾ ಎಂದು ದೃಢಪಡಿಸಿತು.
ನಿರ್ದಿಷ್ಟವಾಗಿ ‘ಮಾನಿಟೇರಿಯಾ’ ‘ಪುದೀನ ತರಹದ’ ಎಲೆಗಳಂತೆ ಕಾಣಿಸುತ್ತದೆ. ಸಸ್ಯವು ತೇವಾಂಶವುಳ್ಳ ಮತ್ತು ನಿತ್ಯಹರಿದ್ವರ್ಣ ಕಾಡುಗಳಲ್ಲಿ 543 ರಿಂದ 1134 ಮೀ ಎತ್ತರದಲ್ಲಿ ಬೆಳೆಯುತ್ತದೆ. ಹೂ ಬಿಡುವ ಮತ್ತು ಫ್ರೂಟಿಂಗ್ ಸಮಯ ಅಕ್ಟೋಬರ್ ಮತ್ತು ಜನವರಿ ನಡುವೆ ಇರುತ್ತದೆ. ಈ ಪ್ರಭೇದವನ್ನು ಇಲ್ಲಿ ತಾತ್ಕಾಲಿಕವಾಗಿ ‘ಅಳಿವಿನಂಚಿನಲ್ಲಿರುವ’ ಪಟ್ಟಿಯಲ್ಲಿರಿಸಲಾಗಿದೆ.