alex Certify SHOCKING: ಪಕ್ಕದ ಮನೆಯವನಿಂದಲೇ ಆಘಾತಕಾರಿ ಕೃತ್ಯ, ಅತ್ಯಾಚಾರ ಎಸಗಿ ಚೀಲದಲ್ಲಿ ಬಾಲಕಿ ತುಂಬಿ ನಾಲೆಗೆ ಎಸೆಯಲು ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಪಕ್ಕದ ಮನೆಯವನಿಂದಲೇ ಆಘಾತಕಾರಿ ಕೃತ್ಯ, ಅತ್ಯಾಚಾರ ಎಸಗಿ ಚೀಲದಲ್ಲಿ ಬಾಲಕಿ ತುಂಬಿ ನಾಲೆಗೆ ಎಸೆಯಲು ಯತ್ನ

ಹಾಸನ: ಪಕ್ಕದ ಮನೆ ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಯುವಕ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

ಹಾಸನ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ 26 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮನೆ ಬಳಿ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದೊಯ್ದ ಯುವಕ ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ಕಾಣಿಸದಿದ್ದಾಗ ಗಾಬರಿಯಾದ ಮನೆಯವರು ಹುಡುಕಾಟ ನಡೆಸಿದ್ದಾರೆ. ಯುವಕನ ಮನೆಗೂ ಬಂದು ಪ್ರಶ್ನಿಸಿದ್ದಾರೆ. ಆದರೆ, ಬಾಲಕಿಯನ್ನು ಅಟ್ಟದಲ್ಲಿ ಬಚ್ಚಿಟ್ಟಿದ್ದ ಯುವಕ ನಮ್ಮ ಮನೆಗೆ ಬಂದಿಲ್ಲವೆಂದು ಸುಳ್ಳು ಹೇಳಿದ್ದಾನೆ.

ಅತ್ಯಾಚಾರ ಎಸಗಿದ ನಂತರ ಬಾಲಕಿಯನ್ನು ಚೀಲವೊಂದರಲ್ಲಿ ಹಾಕಿ ಹೇಮಾವತಿ ನಾಲೆಗೆ ಎಸೆಯಲು ಹೊತ್ತುಕೊಂಡು ಹೋಗುವಾಗ ದಾರಿಹೋಕರೊಬ್ಬರು ಚೀಲ ಮಿಸುಕಾಡಿದ್ದನ್ನು ಗಮನಿಸಿ ಪ್ರಶ್ನಿಸಿದ್ದಾರೆ. ಚೀಲದೊಳಗೆ ಅಸ್ವಸ್ಥ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದಿದ್ದಾರೆ ಎನ್ನಲಾಗಿದೆ. ಬಾಲಕಿ ತಾಯಿ ಗೊರೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...