alex Certify ಪ್ರತಿಷ್ಠಿತ ಮಠದ ಅಧಿಕಾರಿಯಿಂದ ಅತ್ಯಾಚಾರ: ಉಪನ್ಯಾಸಕಿ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಠಿತ ಮಠದ ಅಧಿಕಾರಿಯಿಂದ ಅತ್ಯಾಚಾರ: ಉಪನ್ಯಾಸಕಿ ದೂರು

ಬೆಂಗಳೂರು: ಚಿತ್ರದುರ್ಗದ ಪ್ರತಿಷ್ಠಿತ ಮಠವೊಂದರ ಸಿಇಒ ಲೈಂಗಿಕ ದೌರ್ಜನ್ಯವೆಸಗಿ, ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡುತ್ತಿರುವುದಾಗಿ ಉಪನ್ಯಾಸಕಿ ದೂರು ನೀಡಿದ್ದಾರೆ.

ಬೆಂಗಳೂರಿನ ಆರ್.ಎಂ.ಸಿ. ಪೊಲೀಸ್ ಠಾಣೆಗೆ 32 ವರ್ಷದ ಉಪನ್ಯಾಸಕಿ ದೂರು ನೀಡಿದ್ದು, ಪ್ರತಿಷ್ಠಿತ ಮಠದ ಸಿಇಒ ವಿರುದ್ಧ ಕೇಸು ದಾಖಲಾಗಿದೆ. ಇದೇ ಪ್ರಕರಣದಲ್ಲಿ ಬೆದರಿಕೆ ಹಾಕಿದ್ದ ಮಠದ ಕಾರ್ಯದರ್ಶಿ ಮತ್ತು ಕಾನೂನು ಸಲಹೆಗಾರ ಹಾಗೂ ಸಮಾಜವೊಂದರ ಅಧ್ಯಕ್ಷನ ವಿರುದ್ಧವೂ ದೂರು ದಾಖಲಾಗಿದೆ.

ಉಪನ್ಯಾಸಕಿ 2019 ರ ಅಕ್ಟೋಬರ್ 25 ರಂದು ಕಾರ್ಯಾಗಾರವೊಂದನ್ನು ನಡೆಸಲು ಮಠದ ಸಿಇಒ ಭೇಟಿಯಾಗಿದ್ದರು. ಕಾರ್ಯಕ್ರಮ ಮುಗಿದ ನಂತರ ಪರಿಚಿತನಾಗಿದ್ದ ಸಿಇಒ ಬೆಂಗಳೂರಿಗೆ ಬಂದಿರುವುದಾಗಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ರೂಂ ಬುಕ್ ಮಾಡಿ ನಾನು ವಿಚ್ಛೇದನ ಪಡೆದುಕೊಂಡಿದ್ದು ನಿನ್ನನ್ನೇ ಮದುವೆಯಾಗುತ್ತೇನೆಂದು ನಂಬಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರದಲ್ಲಿ ಖಾಸಗಿ ವಿಡಿಯೋ ಇದೆಯೆಂದು ಬ್ಲಾಕ್ಮೇಲ್ ಮಾಡಿ ಐಷಾರಾಮಿ ಹೋಟೆಲ್ಗೆ ಕರೆಸಿಕೊಂಡು ಎರಡು ದಿನ ನಿರಂತರ ಅತ್ಯಾಚಾರ ಎಸಗಿದ್ದಾನೆ. ಹೀಗೆ ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪಿ ಮದುವೆಯಾಗಲು ನಿರಾಕರಿಸಿದ್ದಾನೆ. ಆತನ ಹಿನ್ನಲೆ ವಿಚಾರಿಸಿದಾಗ ಆತ ಪತ್ನಿಯಿಂದ ವಿಚ್ಛೇದನ ಪಡೆದಿಲ್ಲ ಎನ್ನುವುದು ಗೊತ್ತಾಗಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಕಡೆಯವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉಪನ್ಯಾಸಕಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...