alex Certify ತಡರಾತ್ರಿ ಕಳ್ಳತನಕ್ಕೆ ಬಂದವನಿಂದ ನೀಚ ಕೃತ್ಯ: ಮದ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಕಳ್ಳತನಕ್ಕೆ ಬಂದವನಿಂದ ನೀಚ ಕೃತ್ಯ: ಮದ್ಯ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ

ಬೆಳಗಾವಿ: ತಡರಾತ್ರಿ ಮನೆಯಲ್ಲಿ ಕಳವಿಗೆ ಬಂದಿದ್ದ ಕಿಡಿಗೇಡಿಯೊಬ್ಬ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅನಿಲ್(31) ಬಂಧಿತ ಆರೋಪಿ. ಯಕ್ಸಂಬಾದ ಮನೆಯೊಂದರಲ್ಲಿ ಕಳವಿಗೆಂದು ಬಂದಿದ್ದ ಆರೋಪಿ ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಆಕೆಗೆ ಮದ್ಯ ಕುಡಿಸಿ ಅತ್ಯಾಚಾರವೆಸಗಿದ್ದಾನೆ.

ಅನಿಲ ಕಳ್ಳತನಕ್ಕೆ ನುಗ್ಗಿದ ಮನೆಯಲ್ಲಿ ಬಾಲಕಿಯ ಮಲಗಿದ್ದಳು. ಆಕೆಯನ್ನೇ ಹೊತ್ತುಕೊಂಡು ಹೋದ ಆರೋಪಿ ನಿಪ್ಪಾಣಿ ತಾಲೂಕಿನ ಗ್ರಾಮವೊಂದಕ್ಕೆ ಕರೆದೊಯ್ದು ಮದ್ಯ ಕುಡಿಸಿ ತಾನೂ ಮದ್ಯ ಸೇವಿಸಿ ಅತ್ಯಾಚಾರವೆಸಗಿದ್ದಾನೆ. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...