alex Certify ಸ್ವಯಂಘೋಷಿತ ದೇವಮಾನವ ರಾಮ್​ ರಹೀಂಗೆ 30 ದಿನಗಳ ಪೆರೋಲ್​: 2.5 ವರ್ಷಗಳಲ್ಲಿ 7ನೇ ಬಾರಿ ಜೈಲಿಂದ ಹೊರಕ್ಕೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಯಂಘೋಷಿತ ದೇವಮಾನವ ರಾಮ್​ ರಹೀಂಗೆ 30 ದಿನಗಳ ಪೆರೋಲ್​: 2.5 ವರ್ಷಗಳಲ್ಲಿ 7ನೇ ಬಾರಿ ಜೈಲಿಂದ ಹೊರಕ್ಕೆ….!

ಸ್ವಯಂಘೋಷಿತ ದೇವಮಾನವ ಹಾಗೂ ಡೇರಾ ಸಚ್ಛಾ ಸೌಧ ಮುಖ್ಯಸ್ಥ ರಾಮ್ ರಹೀಂ ಮತ್ತೊಮ್ಮೆ ಪೆರೋಲ್​ ಮೂಲಕ ಹೊರ ಬಂದಿದ್ದಾರೆ. ಇಂದಿನಿಂದ ಮುಂದಿನ 30 ದಿನಗಳವರೆಗೆ ರಾಮ್​ ರಹೀರಂ ಪೆರೋಲ್​ ಮೇರೆಗೆ ಜೈಲಿನಿಂದ ಹೊರಗಿರಲಿದ್ದಾರೆ.

ಸದ್ಯ ರಾಮ್​ ರಹೀಂ ರೌಠಕ್​​ನಲ್ಲಿರುವ ಸುನಾರಿಯಾ ಜೈಲಿನಲ್ಲಿದ್ದಾರೆ. ರಾಮ್​ ರಹೀಂ ಪೆರೋಲ್​ ಅರ್ಜಿಯನ್ನು ಸ್ವೀಕರಿಸಲಾಗಿದ್ದು ಇಂದು ಸಂಜೆಯ ಒಳಗಾಗಿ ಬಾಂಡ್​ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ. ಸಿರ್ಸಾ ಆಶ್ರಮ ಪ್ರವೇಶಕ್ಕೆ ರಾಮ್​ ರಹೀಂಗೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಭಾಗಪತ್​ನಲ್ಲಿರುವ ಬರ್ವಾನಾದಲ್ಲಿರುವ ಆಶ್ರಮಕ್ಕೆ ರಾಮ್​ ರಹೀಂ ತೆರಳಲಿದ್ದಾರೆ ಎನ್ನಲಾಗಿದೆ.

ಕಳೆದ 20 ತಿಂಗಳಲ್ಲಿ ಐದನೇ ಬಾರಿಗೆ ಹಾಗೂ ಕಳೆದ 9 ತಿಂಗಳ ಅವಧಿಯಲ್ಲಿ ಮೂರನೇ ಬಾರಿಗೆ ರಾಮ್​ ರಹೀಂಗೆ ಪೆರೋಲ್​ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ಹರಿಯಾಣ ಪಂಚಾಯತ್​ ಚುನಾವಣೆ, ಆದಂಪುರ ವಿಧಾನಸಭಾ ಉಪ ಚುನಾವಣೆಗೆ ಮುಂಚಿತವಾಗಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 40 ದಿನಗಳ ಪೆರೋಲ್​ ನೀಡಲಾಗಿತ್ತು. 2020ರ ಅಕ್ಟೋಬರ್​ 24ರಂದು ಮೊಟ್ಟ ಮೊದಲ ಬಾರಿಗೆ ಪೆರೋಲ್​ ಮೇಲೆ ರಾಮ್​ ರಹೀಂ ಹೊರ ಬಂದಿದ್ದರು. ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ರಾಮ್​ ರಹೀಂ ಏಳನೇ ಬಾರಿಗೆ ಜೈಲಿನಿಂದ ಪೆರೋಲ್​ ಮೂಲಕ ಹೊರ ಬಂದಂತೆ ಆಗಿದೆ.

2020ರ ಅಕ್ಟೋಬರ್ 24ರಂದು ಮೊಟ್ಟ ಮೊದಲ ಬಾರಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಭೇಟಿ ಮಾಡಲು ಸರ್ಕಾರ ಅವರಿಗೆ 1 ದಿನದ ಪೆರೋಲ್​ ನೀಡಿತ್ತು.

ಎರಡನೇ ಬಾರಿಗೆ 2021ರ ಮೇ 21 ರಂದು ಮತ್ತೊಮ್ಮೆ ತಾಯಿಯನ್ನು ಭೇಟಿಯಾಗಲು ಒಂದು ದಿನದ ಪೆರೋಲ್​ ನೀಡಿತ್ತು.

2022ರ ಫೆಬ್ರವರಿ 7ರಂದು ಹರಿಯಾಣ ಸರ್ಕಾರ, ರಾಮ್​ ರಹೀಂಗೆ 21 ದಿನಗಳ ಪೆರೋಲ್​ ನೀಡಿತ್ತು.

2022ರ ಜೂನ್​ ತಿಂಗಳಲ್ಲಿ ರಾಮ್​ ರಹೀಂ ಮತ್ತೊಮ್ಮೆ ಒಂದು ತಿಂಗಳ ಪೆರೋಲ್​ ನೀಡಿತ್ತು.

2022ರ ಅಕ್ಟೋಬರ್​ ತಿಂಗಳಲ್ಲಿ ರಾಮ್​ ರಹೀಂ ಮತ್ತೊಮ್ಮೆ 40 ದಿನಗಳ ಪೆರೋಲ್​ ಮೇಲೆ ಜೈಲಿನಿಂದ ಹೊರ ಬಂದಿದ್ದರು.

ಡೇರಾ ಮುಖ್ಯಸ್ಥ ಶಾ ಸತ್ನಾಮ್​ ಜನ್ಮ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಮ್​ ರಹೀಂಗೆ 2023ರ ಜನವರಿ 21ರಂದು 40 ದಿನಗಳ ಪೆರೋಲ್​ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...