alex Certify ಇಲ್ಲಿದೆ ಐಷಾರಾಮಿ ಮರ್ಸಿಡೀಸ್​ ಮೇ ಬ್ಯಾಚ್​ ಜಿಎಲ್​ಎಸ್​ 60 ಕಾರು ಖರೀದಿಸಿದ ತಾರೆಯರ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಐಷಾರಾಮಿ ಮರ್ಸಿಡೀಸ್​ ಮೇ ಬ್ಯಾಚ್​ ಜಿಎಲ್​ಎಸ್​ 60 ಕಾರು ಖರೀದಿಸಿದ ತಾರೆಯರ ಪಟ್ಟಿ

ಐಷಾರಾಮಿ ಕಾರುಗಳನ್ನು ಖರೀದಿಸೋದು ಅಂದರೆ ಸೆಲೆಬ್ರಿಟಿಗಳು ಎರಡು ಹೆಜ್ಜೆ ಮುಂದಿರ್ತಾರೆ. ಅನೇಕ ಸೆಲೆಬ್ರಿಟಿಗಳಿಗೆ ಐಷಾರಾಮಿ ಕಾರುಗಳನ್ನು ಖರೀದಿಸೋದು ಹವ್ಯಾಸವೇ ಆಗಿದೆ. ಕಳೆದ ಕೆಲ ತಿಂಗಳಿನಿಂದ ದೇಶದ ಅನೇಕ ಸೆಲೆಬ್ರಿಟಿಗಳು ಮರ್ಸೀಡೀಸ್​ ಮೇ ಬ್ಯಾಚ್ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾದರೆ ಯಾರ್ಯಾರು ಈ ಕಾರನ್ನು ಖರೀದಿಸಿದ್ದಾರೆ ಅನ್ನೋದನ್ನ ನೋಡೋಣ ಬನ್ನಿ

ರಾಮ್​ ಚರಣ್​

ದಕ್ಷಿಣ ಭಾರತದ ಸೂಪರ್​ ಸ್ಟಾರ್​ ರಾಮಚರಣ್​ ಸೆಪ್ಟೆಂಬರ್​ 12ರಂದು ಈ ಕೆಸ್ಟಮೈಸಡ್​​​ ಮರ್ಸಿಡೀಸ್​ ಮೇ ಬ್ಯಾಚ್​ ಜಿಎಲ್​ಎಸ್​ 600 ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ 4 ಕೋಟಿ ರೂಪಾಯಿ ಆಗಿದೆ. ಕಾರಿನ ಜೊತೆ ರಾಮ್​ಚರಣ್​ ಇರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.

ಕೃತಿ ಸನೂನ್​

ʼಮಿನಿʼ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ನಟಿ ಕೃತಿ ಸನೂನ್​, ಮೇಬ್ಯಾಚ್​ ಜಿಎಲ್​​ಎಸ್​​ 600 4ಮೆಟಿಕ್​ ಎಸ್​ಯುವಿಯ ಮಾಲೀಕೆಯಾಗಿದ್ದಾರೆ. ಇದರ ಬೆಲೆ 2.43 ಕೋಟಿ ರೂಪಾಯಿ ಆಗಿದೆ. ಮುಂಬೈನಲ್ಲಿ ಕೃತಿ ಕಾರಿನ ಡೆಲಿವರಿ ಪಡೆದಿದ್ದಾರೆ .

ಆಯುಷ್ಮಾನ್​ ಖುರಾನಾ

ಬಾಲಿವುಡ್​ ನಟ ಆಯುಷ್ಮಾನ್​ ಖುರಾನಾ ಜುಲೈನಲ್ಲಿ ಮರ್ಸಿಡೀಸ್​ ಮೇಬ್ಯಾಚ್​ ಜಿಎಲ್​ಎಸ್​ 600 ಕಾರನ್ನು ಖರೀದಿ ಮಾಡಿದ್ದಾರೆ.

ರಣವೀರ್​ ಸಿಂಗ್​

ರಣವೀರ್​ ಸಿಂಗ್​​ ಜೂನ್​ ತಿಂಗಳಲ್ಲಿ ಈ ಕಾರನ್ನು ಖರೀದಿ ಮಾಡಿದ್ದಾರೆ. ಜೂನ್​ 23ರಂದು ಇವರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು. ಕಾರನ್ನು ಡ್ರೈವ್​ ಮಾಡುತ್ತಿರುವ ವಿಡಿಯೋವನ್ನೂ ರಣವೀರ್​ ಸಿಂಗ್​ ಶೇರ್​ ಮಾಡಿದ್ದರು. ತಮ್ಮ ಹೊಸ ಕಾರಿನಲ್ಲಿ ಅರ್ಜುನ್​ ಕಪೂರ್​​ರನ್ನು ಕೂರಿಸಿಕೊಂಡು ಡ್ರೈವ್​ ಮಾಡಿದ್ದರು.

ಅರ್ಜುನ್​ ಕಪೂರ್​

ರಣವೀರ್​ ಸಿಂಗ್​ ಜೊತೆ ಟೆಸ್ಟ್​ ಡ್ರೈವ್​ಗೆ ತೆರಳಿದ್ದ ಅರ್ಜುನ್​ ಕಪೂರ್​ ಕೂಡ ಈ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಇವರು ಮುಂಬೈನಲ್ಲಿ ಕಾರಿನ ಡೆಲಿವರಿ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...