alex Certify ಪತ್ನಿ ದೀಪಿಕಾಗಾಗಿ ತಾಯಿ ಹುಟ್ಟುಹಬ್ಬದಂದು ಸ್ಪೇಷಲ್ ಡಾನ್ಸ್ ಮಾಡಿದ ರಣವೀರ್ ಸಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿ ದೀಪಿಕಾಗಾಗಿ ತಾಯಿ ಹುಟ್ಟುಹಬ್ಬದಂದು ಸ್ಪೇಷಲ್ ಡಾನ್ಸ್ ಮಾಡಿದ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ ತಾಯಿ ಅಂಜು ಭವಾನಿ ಹುಟ್ಟು ಹಬ್ಬದ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಭಾನುವಾರ ಮಧ್ಯಾಹ್ನ ಪಾರ್ಟಿಗೆ ಹೋಗ್ತಿದ್ದ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ, ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿದ್ದವು.

ಈಗ ರಣವೀರ್ ಪಾರ್ಟಿಯಲ್ಲಿ ಮಾಡಿದ ಡಾನ್ಸ್ ವಿಡಿಯೋ ವೈರಲ್ ಆಗಿದೆ. ರಣವೀರ್, ಅನೇಕ ಹಾಡಿಗೆ ಡಾನ್ಸ್ ಮಾಡಿದ್ದಾರೆ. ನಶೇಸೆ ಚಡ್ ಗಯಾ ಹಾಡಿಗೆ ರಣವೀರ್, ಡಾನ್ಸ್ ಮಾಡಿದ್ದಾರೆ.

ಜಾಕೆಟ್ ತೆಗೆದು ಬಿಳಿ ಬನಿಯಾನ್ ಹಾಗೂ ಕಪ್ಪು ಪ್ಯಾಂಟ್ ನಲ್ಲಿ ರಣವೀರ್ ಡಾನ್ಸ್ ಮಾಡಿದ್ದಾರೆ. ದೀಪಿಕಾ ಮುಂದೆ ರಣವೀರ್ ಸ್ಟೆಪ್ ಹಾಕಿದ್ದು, ಕುಟುಂಬಸ್ಥರು ಮುಂದೆ ಕುಳಿತು ಎಂಜಾಯ್ ಮಾಡ್ತಿದ್ದಾರೆ.

ಇದಲ್ಲದೆ ರಣವೀರ್, ಪದ್ಮಾವತ್ ಹಾಗೂ ದಿಲ್ ಜೋರಿ ಹಾಡಿಗೂ ಡಾನ್ಸ್ ಮಾಡಿದ್ದಾರೆ. ರಣವೀರ್ ಯಾವಾಗಲೂ ಮೋಜು, ಮಸ್ತಿಗೆ ಆದ್ಯತೆ ನೀಡ್ತಾರೆ. ವಿಭಿನ್ನ ಸ್ಟೈಲ್ ಹಾಗೂ ಡಾನ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ತಾಯಿ ಹುಟ್ಟುಹಬ್ಬದ ಪಾರ್ಟಿಯಲ್ಲೂ ರಣವೀರ್ ಗಮನ ಸೆಳೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...