alex Certify ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯೆಯೇ ರೇಂಜ್ ರೋವರ್ ಕಾರು ಬೆಂಕಿಗಾಹುತಿ: ವಿಡಿಯೋ ವೈರಲ್​

ಆಘಾತಕಾರಿ ಘಟನೆಯೊಂದರಲ್ಲಿ ರೇಂಜ್ ರೋವರ್ ಇವೊಕ್ ಕಾರು ರಸ್ತೆಯ ಮಧ್ಯದಲ್ಲಿ ಬೆಂಕಿಗೆ ಆಹುತಿಯಾಗಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಈ ಘಟನೆಯು ಚಲಿಸುವ ಎಸ್‌ಯುವಿಯಲ್ಲಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ ನಡೆದಿದೆ. ಆದಾಗ್ಯೂ, ಈ ವಿಡಿಯೋ ಎಲ್ಲಿ ಶೂಟ್​ ಮಾಡಲಾಗಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಸೂರಜ್ ಟ್ರಾವೆಲಿಂಗ್ ಗೈಡರ್ ಎಂಬ ಇಂಟರ್ನೆಟ್ ಬಳಕೆದಾರರು ಇಡೀ ಘಟನೆಯನ್ನು ಯೂಟ್ಯೂಬ್‌ನಲ್ಲಿ ಕಿರು ರೂಪದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕೆಂಪು-ಬಣ್ಣದ ರೇಂಜ್ ರೋವರ್ ಇವೊಕ್ ಜನನಿಬಿಡ ರಸ್ತೆಯಲ್ಲಿ ನಿಲ್ಲುವುದರೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಬಾನೆಟ್ ಬೆಂಕಿಗೆ ಆಹುತಿಯಾಗುವುದನ್ನು ನೋಡಬಹುದು.

ಆರಂಭದಲ್ಲಿ, ಹುಡ್​ನಿಂದ ಬೆಂಕಿ ಹೊರಬರಲು ಪ್ರಾರಂಭಿಸುತ್ತದೆ. ನಂತರ, ಇದು ವಾಹನದ ಮುಂಭಾಗವನ್ನು ಆವರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವೃತ್ತಿಪರವಲ್ಲದವರ ಅಸಮರ್ಪಕ ವೈರಿಂಗ್​ನಿಂದ ಶಾರ್ಟ್ ಸರ್ಕ್ಯೂಟ್‌ ಆಗಿರಬಹುದು ಎಂದು ಊಹಿಸಲಾಗಿದೆ. ಈ ಹಿಂದೆ ಕೂಡ ಇಂಥ ಘಟನೆಗಳು ನಡೆದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...