alex Certify ದೀರ್ಘ ಕಾಲ ನಿದ್ರಿಸದೆ ದಾಖಲೆ ಮಾಡಿದ ಭೂಪ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘ ಕಾಲ ನಿದ್ರಿಸದೆ ದಾಖಲೆ ಮಾಡಿದ ಭೂಪ….!

ನಿದ್ದೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಕೆಲವರು ರಾತ್ರಿ 10 ಗಂಟೆಗೆ ಮಲಗಿದ್ರೆ, ಬೆಳಗ್ಗೆ 10 ಗಂಟೆ ಆದರೂ ಏಳುವುದಿಲ್ಲ. ಇನ್ನೂ ಕೆಲವರು ನಿದ್ದೆ ಬಂದಿಲ್ಲ.. ಇನ್ನು ನಿಂದೆ ಬಂದಿಲ್ಲ ಅಂತಿರ್ತಾರೆ. ಆದ್ರೆ ಒಬ್ಬ ವ್ಯಕ್ತಿಯು ಪ್ರತಿದಿನ ಕನಿಷ್ಠ ಆರರಿಂದ ಎಂಟು ಗಂಟೆಗಳವರೆಗೆ ನಿದ್ದೆ ಮಾಡುವುದು ಅತ್ಯಗತ್ಯ. ಆರೋಗ್ಯಕ್ಕೂ ಒಳ್ಳೆಯದು. ಇಲ್ಲೊಬ್ಬ ವ್ಯಕ್ತಿಯು 11 ದಿನ ನಿದ್ದೆ ಮಾಡದ ರಾತ್ರಿಗಳನ್ನು ಕಳೆದಿದ್ದಾರೆ.

ಹೌದು, ರಾಂಡಿ ಗಾರ್ಡ್ನರ್ ಎಂಬಾತ 11 ದಿನಗಳು ಮತ್ತು 25 ನಿಮಿಷ ನಿದ್ದೆ ಮಾಡದೆ ದಾಖಲೆ ನಿರ್ಮಿಸಿದ್ದರು. ಡಿಸೆಂಬರ್ 1963, ಗಾರ್ಡ್ನರ್ ಮತ್ತು ಅವನ ಸ್ನೇಹಿತ ಬ್ರೂಸ್ ಮ್ಯಾಕ್ ಆಲಿಸ್ಟರ್, ಅವರು ಪ್ರೌಢಶಾಲೆಯಲ್ಲಿದ್ದಾಗ ವಿಜ್ಞಾನ ಮೇಳದ ಯೋಜನೆಗಾಗಿ ನಿದ್ದೆ ಮಾಡದೆ ಎಷ್ಚು ಸಮಯದವರೆಗೆ ಎಚ್ಚರವಾಗಿರಬಹುದು ಮತ್ತು ಪ್ರಯೋಗದ ಅಡ್ಡ ಪರಿಣಾಮಗಳನ್ನು ಅಧ್ಯಯನ ಮಾಡುವುದಕ್ಕಾಗಿ ನಿರ್ಧರಿಸಿದರು.

ಆ ಸಮಯದಲ್ಲಿ ರಾಂಡಿ ಗಾರ್ಡ್ನರ್ ವಯಸ್ಸು 17 ವರ್ಷ. ಈತನ ಗೆಳೆಯ ಮ್ಯಾಕ್ ಆಲಿಸ್ಟರ್ ಗಾರ್ಡ್ನರ್ ನನ್ನು ಗಮನಿಸುವ ಸಲುವಾಗಿ ಮೂರು ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದನಂತೆ. ಬಳಿಕ ನಿದ್ದೆ ತಡೆಯದೆ ಜೋ ಮಾರ್ಸಿಯಾನೊ ಎಂಬ ವ್ಯಕ್ತಿಯನ್ನು ಗಾರ್ಡ್ನರ್ ನನ್ನು ಗಮನಿಸಲು ನಿಯೋಜಿಸಿದ್ದರಂತೆ.

BIG NEWS: ಕೇರಳದಲ್ಲಿ 3ನೇ ಅಲೆ ಸ್ಫೋಟ; ಆಗಸ್ಟ್ ನಲ್ಲಿ ರಾಜ್ಯಕ್ಕೂ ಅಪ್ಪಳಿಸುವ ಭೀತಿ; ಈಗಲಾದರೂ ಮುಂಜಾಗೃತೆ ಕೈಗೊಳ್ಳಿ; ಸರ್ಕಾರಕ್ಕೆ HDK ಸಲಹೆ

ಮೂರನೆಯ ದಿನದಲ್ಲಿ, ಗಾರ್ಡ್ನರ್ ಸಮನ್ವಯವಿಲ್ಲದ ಮತ್ತು ಭಾವುಕರಾದರು ಎಂದು ಹೇಳಲಾಗಿದೆ. ಅವರು ನಾಲ್ಕನೇ ದಿನದಿಂದ ಭ್ರಮೆ ಹೊಂದಲು ಪ್ರಾರಂಭಿಸಿದರಂತೆ. ತನ್ನನ್ನು ತೊಡಗಿಸಿಕೊಳ್ಳಲು ಗಾರ್ಡ್ನರ್ ಸಹ ವಿದ್ಯಾರ್ಥಿಗಳೊಂದಿಗೆ ಬ್ಯಾಸ್ಕೆಟ್ ಬಾಲ್ ಮತ್ತು ಪಿನ್ ಬಾಲ್ ಆಡುತ್ತಿದ್ದರಂತೆ. ಆಶ್ಚರ್ಯ ಅಂದ್ರೆ, ಅವರು ಉತ್ತಮವಾಗಿಯೇ ಬ್ಯಾಸ್ಕೆಟ್ ಬಾಲ್ ಆಡಿದ್ದರು.

ಇನ್ನು ಗಾರ್ಡ್ನರ್ ಹೇಳುವ ಪ್ರಕಾರ ಹಗಲಿನಲ್ಲಿ ಎಚ್ಚರವಾಗಿರುವುದು ಸುಲಭ ಆದರೆ ರಾತ್ರಿ ಮಾತ್ರ ಸವಾಲಿನಿಂದ ಕೂಡಿರುತ್ತದೆ ಅಂದಿದ್ದಾರೆ. ಒಟ್ಟಿನಲ್ಲಿ ಈ ಪ್ರಯೋಗವು ಜನವರಿ 8, 1964ರಂದು ಕೊನೆಗೊಂಡಿತ್ತು. 264.4 ಗಂಟೆಗಳ ಕಾಲ ಎಚ್ಚರವಾಗಿರುವಲ್ಲಿ ಯಶಸ್ವಿಯಾದರು.

ಪ್ರಯೋಗ ಮುಗಿದ ನಂತರ ಗಾರ್ಡ್ನರ್, 14 ಗಂಟೆ 40 ನಿಮಿಷಗಳ ಕಾಲ ನಿದ್ದೆಗೆ ಜಾರಿದ್ದರಂತೆ, ಬಳಿಕ ಸಹಜವಾಗಿಯೇ ರಾತ್ರಿ 8.40ರ ಸುಮಾರಿಗೆ ಎಚ್ಚರಗೊಂಡರಂತೆ. ಆದರೆ, ಮುಂದಿನ ದಿನಗಳಲ್ಲಿ ಗಾರ್ಡ್ನರ್ ಗೆ ನಿದ್ದೆ ಮಾಡುವುದು ಕಷ್ಟಕರವಾಗಿತ್ತಂತೆ. ಜೊತೆಗೆ ದಶಕಗಳ ಕಾಲ ಅವರು ನಿದ್ರಾಹೀನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...