alex Certify ಆಟಿಕೆ ಎಂದು ಭಾವಿಸಿ ಪಿಸ್ತೂಲ್‌ ನಿಂದ ಶೂಟ್ ಮಾಡಿಕೊಂಡ ಹುಡುಗಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಕೆ ಎಂದು ಭಾವಿಸಿ ಪಿಸ್ತೂಲ್‌ ನಿಂದ ಶೂಟ್ ಮಾಡಿಕೊಂಡ ಹುಡುಗಿ

ನಿಜವಾದ ಪಿಸ್ತೂಲ್‌ ಅನ್ನು ಆಟಿಕೆ ಎಂದುಕೊಂಡು ಸ್ವತಃ ಶೂಟ್ ಮಾಡಿಕೊಂಡ ಬಿಬಿಎ ವಿದ್ಯಾರ್ಥಿನಿಯೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ರಾಂಚಿಯಲ್ಲಿ ನಡೆದಿದೆ.

ಭಾನುವಾರ ಸಂಜೆ ಏಳು ಗಂಟೆಗೆ ನಡೆದ ಈ ಘಟನೆಯಲ್ಲಿ, ಬಿಬಿಎ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿನಿ ಶ್ವೇತಾ ಕುಮಾರಿ ಝಾ ಹೀಗೆ ಮಾಡಿಕೊಂಡಿದ್ದಾರೆ. ಆಕೆಯನ್ನು ನಗರದ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌) ಯಲ್ಲಿ ದಾಖಲಿಸಲಾಗಿದೆ.

ಈ ಐಸ್‌ ಕ್ರೀಮ್‍ಗೆ ಶುಂಠಿ-ಬೆಳ್ಳುಳ್ಳಿ ಕೂಡ ಸೇರಿಸಿ ಅಂದ್ರು ನೆಟ್ಟಿಗರು..! ಯಾಕೆ ಗೊತ್ತಾ…?

ತಮ್ಮ ಮನೆಗೆ ಬಂದ ಇಬ್ಬರು ಅಪರಿಚಿತರು ಕೊಟ್ಟ ಬಾಕ್ಸ್ ಒಂದರಲ್ಲಿ ಗನ್ ಇತ್ತು ಎಂದು ಶ್ವೇತ ಸಹೋದರ ತಿಳಿಸಿದ್ದಾರೆ.

“ಗುಂಡು ಆಕೆಯ ತಲೆಯಲ್ಲಿ ಹೊಕ್ಕಿದೆಯೋ ಅಥವಾ ಹಾದು ಹೋಗಿದೆಯೋ ಎಂದು ತಿಳಿಯಲು ಯತ್ನಿಸುತ್ತಿದ್ದೇವೆ. ಆಕೆಯನ್ನು ಉಳಿಸಲು ನಾವು ನಮ್ಮೆಲ್ಲಾ ಪ್ರಯತ್ನ ಮಾಡುತ್ತಿದ್ದೇವೆ,” ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ತನಿಖೆ ಪ್ರಗತಿಯಲ್ಲಿದ್ದು, ಹುಡುಗಿಯ ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ಕೋನಗಳಿಂದಲೂ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...