alex Certify ಚಂದ್ರ ದರ್ಶನವಾಗದ ಕಾರಣ ಮೇ 3ರ ನಾಳೆ ರಂಜಾನ್ ಆಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಂದ್ರ ದರ್ಶನವಾಗದ ಕಾರಣ ಮೇ 3ರ ನಾಳೆ ರಂಜಾನ್ ಆಚರಣೆ

ಬೆಂಗಳೂರು: ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಸೋಮವಾರದ ಬದಲು ಮಂಗಳವಾರ ಆಚರಿಸಲಾಗುವುದು.

ವಕ್ಫ್ ಮಂಡಳಿಯಿಂದ ಈ ಕುರಿತಾಗಿ ಮಾಹಿತಿ ನೀಡಲಾಗಿದೆ. ಚಂದ್ರದರ್ಶನ ಸಮಿತಿಯ ಮೌಲಾನಾ ಮಸೂದ್ ಇಮ್ರಾನ್ ರಶಾದಿ ಅವರು ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬ ಆಚರಿಸುವಂತೆ ತಿಳಿಸಿದ್ದಾರೆ.

ರಾಜ್ಯ ವಕ್ಫ್ ಮಂಡಳಿಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಹಾಗೂ ದೇಶದ ಯಾವ ಭಾಗದಲ್ಲಿಯೂ ಚಂದ್ರ ದರ್ಶನವಾದ ಬಗ್ಗೆ ವರದಿಯಾಗಿಲ್ಲ. ಈ ಕಾರಣದಿಂದ ಮಂಗಳವಾರ ರಂಜಾನ್ ಆಚರಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...