
ಮಂಗಳೂರು: ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝೀ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ. ಚಂದ್ರ ದರ್ಶನವಾಗಿರುವುದರಿಂದ ಕರಾವಳಿಯಲ್ಲಿ ರಂಜಾನ್ ಮಾಸದ ಉಪವಾಸ ವ್ರತ ನಾಳೆಯಿಂದ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಪವಿತ್ರ ಮಾಸ ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಅನುಸರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಭೋಜನದೊಂದಿಗೆ ಉಪವಾಸ ಮುಗಿಯುತ್ತದೆ.