ಬೆಂಗಳೂರು: ಮಂಗಳವಾರದ ಬದಲು ಸೋಮವಾರವೇ ರಂಜಾನ್ ಆಚರಣೆಗೆ ಮೂನ್ ಕಮಿಟಿ ತೀರ್ಮಾನ ಕೈಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ರಂಜಾನ್ ರಜೆ ಘೋಷಣೆ ಮಾಡಿದೆ.
ಸೋಮವಾರವೇ ರಂಜಾನ್ ಹಬ್ಬ ಆಚರಣೆಗೆ ನಿರ್ಧರಿಸಲಾಗಿದೆ. ಮಂಗಳವಾರದ ಬದಲು ಸೋಮವಾರವೇ ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಮೂನ್ ಕಮಿಟಿ ಈ ಬಗ್ಗೆ ತೀರ್ಮಾನ ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರದಿಂದ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ಈ ಮೊದಲು ಮೇ 3 ರಂದು ರಂಜಾನ್ ಹಬ್ಬದ ರಜೆ ಘೋಷಣೆ ಮಾಡಲಾಗಿತ್ತು. ಮೇ 2 ರಂದು ಹಬ್ಬ ಆಚರಣೆ ಮಾಡಲಿರುವ ಹಿನ್ನಲೆಯಲ್ಲಿ ಅಂದೇ ರಜೆ ನೀಡಲಾಗಿದೆ.