ರಾಜ್ಯದ ಕರಾವಳಿ ಭಾಗದಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು. ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು.
ಉಳ್ಳಾಲ ಖಾಜಿ ಸೈಯದ್ ಕೂರತ್ ತಂಗಲ್ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಗುರುವಾರ ರಂಜಾನ್ ಆಚರಿಸಲಾಗುವುದು.
ಕ್ಯಾಲೆಂಡರ್ ಪ್ರಕಾರ, ಮೇ 14 ರಂದು ಶುಕ್ರವಾರ ರಂಜಾನ್ ಇದ್ದು, ಇಂದು ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಗುರುವಾರ ರಂಜಾನ್ ಆಚರಿಸಲಾಗುತ್ತದೆ. ಹಬ್ಬದೊಂದಿಗೆ ಪವಿತ್ರ ರಂಜಾನ್ ಮಾಸದ ಉಪವಾಸ ಆಚರಣೆ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ.