ಪವಿತ್ರ ರಂಜಾನ್ ಮಾಸದ ಉಪವಾಸ ನಾಳೆ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು. ಕರಾವಳಿ ಸೇರಿದಂತೆ ವಿವಿಧೆಡೆ ಶನಿವಾರ ರಂಜಾನ್ ಆಚರಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅವರು ಈ ಕುರಿತಾಗಿ ಘೋಷಣೆ ಮಾಡಿದ್ದಾರೆ.
ಏಪ್ರಿಲ್ 22ರಂದು ಶನಿವಾರ ಈದ್ ಉಲ್ ಫಿತ್ರ್ ಆಚರಿಸಲು ಉಡುಪಿ, ಉಳ್ಳಾಲ, ಭಟ್ಕಳ ಖಾಜಿಯವರು ಕರೆ ನೀಡಿದ್ದಾರೆ.
ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಪವಿತ್ರ ಮಾಸ ರಂಜಾನ್ ಅನ್ನು ಪ್ರಪಂಚದಾದ್ಯಂತ ಮುಸ್ಲಿಂ ಸಮುದಾಯದವರು ಆಚರಿಸುತ್ತಾರೆ. ಈ ಸಮಯದಲ್ಲಿ 30 ದಿನಗಳ ಕಾಲ ಉಪವಾಸ ಅನುಸರಿಸುತ್ತಾರೆ. ಪ್ರತಿದಿನ ಮುಂಜಾನೆಯಿಂದ ಸಂಜೆಯವರೆಗೆ ಉಪವಾಸ ಅನುಸರಿಸುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಇಫ್ತಾರ್ ಭೋಜನದೊಂದಿಗೆ ಉಪವಾಸ ಮುಗಿಯುತ್ತದೆ. ನಾಳೆ ಉಪವಾಸ ಮುಕ್ತಾಯವಾಗಲಿದ್ದು, ಶನಿವಾರ ರಂಜಾನ್ ಆಚರಿಸಲಾಗುವುದು.
ರಾಜ್ಯದ ಕರಾವಳಿ ಭಾಗದಲ್ಲಿ ಶನಿವಾರ ಪವಿತ್ರ ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಇಂದು ಚಂದ್ರದರ್ಶನ ಹಿನ್ನೆಲೆ ನಾಳೆ ರಂಜಾನ್ ಉಪವಾಸ ಅಂತ್ಯವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಘೋಷಣೆ ಮಾಡಿದ್ದಾರೆ.
ಒಂದು ತಿಂಗಳ ಕಾಲ ಆಚರಿಸುವ ರಂಜಾನ್ ಉಪವಾಸ ವ್ರತ ನಾಳೆ ಅಂತ್ಯವಾಗಲಿದೆ. ವಿಶೇಷ ಪ್ರಾರ್ಥನೆ ಶುಭಾಶಯ ವಿನಿಮಯದ ಜೊತೆಗೆ ಹಬ್ಬ ಆಚರಿಸಲಾಗುವುದು. ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬ ಆಚರಿಸುತ್ತಾರೆ.