ಹೈದರಾಬಾದ್: ರಂಜಾನ್ ಉಪವಾಸ ಆಚರಣೆ ಆರಂಭವಾದ ಹಿನ್ನೆಲೆಯಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿ ಅವಧಿಗಿಂತ ಒಂದು ಗಂಟೆ ಮೊದಲು ಮನೆಗೆ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ.
ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದ ಸರ್ಕಾರಿ ಉದ್ಯೋಗಿಗಳು, ಸಾರ್ವಜನಿಕ ವಲಯದ ಉದ್ಯೋಗಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ಸಂಜೆ 4 ಗಂಟೆಗೆ ಮನೆಗೆ ತೆರಳಬಹುದು. ಏಪ್ರಿಲ್ 3 ರಿಂದ ಮೇ 2 ರವರೆಗೆ ಸಂಜೆ 5 ಗಂಟೆ ಬದಲಿಗೆ 4 ಗಂಟೆಗೆ ಮನೆಗೆ ಹೋಗಬಹುದಾಗಿದೆ ಎಂದು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.