ಮಂಗಳೂರು: ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಇಸ್ಲಾಮಿಕ್ ಕ್ಯಾಲೆಂಡರ್ ನ 9 ನೇ ತಿಂಗಳು ರಂಜಾನ್ ನಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ನೀರನ್ನು ಕೂಡ ಸೇವಿಸದೇ ಉಪವಾಸ ವ್ರತಾಚರಣೆ ಮಾಡುತ್ತಾರೆ.
ಚಂದ್ರದರ್ಶನದ ಬಳಿಕ ರಂಜಾನ್ ಆಚರಿಸಲಾಗುತ್ತದೆ. ಮಂಗಳವಾರ ಚಂದ್ರದರ್ಶನ ಆಗಿದ್ದರಿಂದ ರಂಜಾನ್ ಆರಂಭವಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮಸ್ಲಿಯಾರ್ ಹೇಳಿದ್ದಾರೆ. ಉಡುಪಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿ ಹಲವೆಡೆ ಇಂದಿನಿಂದ ಪವಿತ್ರ ರಂಜಾನ್ ಉಪವಾಸ ಆರಂಭವಾಗಿದೆ ಎನ್ನಲಾಗಿದೆ.