ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಗಂಭೀರತೆ ಅರಿತು ಬಾಂಬ್ ಸ್ಫೋಟ ಕೇಸ್ ನ್ನು ಎನ್ ಐಎ ವರ್ಗಾಯಿಸಲಾಗಿದ್ದು, ಯುಎಪಿಎ ಅಡಿ ಹೆಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನೆರಡು ದಿನಗಳಲ್ಲಿ ಎನ್ ಐ ಎ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.
ಇನ್ನೊಂದೆಡೆ ಬಾಂಬ್ ಸ್ಫೋಟದ ಆರೋಪಿಯ ಕೆಲ ಕುರುಹುಗಳು ಪತ್ತೆಯಾಗಿದ್ದು, ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ. ಆರೋಪಿ ಪತ್ತೆಯಾಗದಿದ್ದಲ್ಲಿ ಪೊಲೀಸರು ಶೀಘ್ರದಲ್ಲೇ ರೇಖಾಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇನ್ನು ರಾಮೇಶ್ವರಂ ಕೆಫೆಯಿಂದ 1 ಕಿ.ಮೀ ದೂರದಲ್ಲಿರುವ ಸಿಸಿಟಿವಿಯಲ್ಲಿ ಶಂಕಿತ ಓಡಾಟ ಸೆರೆಯಾಗಿದೆ. ಬಾಂಬ್ ಇಡಲು ಯಾವ ಮಾರ್ಗದಲ್ಲಿ ಬಂದಿದ್ದನೋ ಅದೇ ಮಾರ್ಗದಲ್ಲಿ ಆತ ವಾಪಾಸ್ ಆಗಿಲ್ಲ. ಬೇರೆ ಯಾವ ಮಾರ್ಗದ ಮೂಲಕ ತೆರಳಿದ್ದಾನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.